ಮುಲ್ಕಿ: ರಾಷ್ಟ್ರ ಕಂಡಂತಹ ಅದ್ಭುತ ಯೋಧ ದೇಶದ ಮೊದಲ ರಕ್ಷಣಾ ಮುಖ್ಯಸ್ಥರಾದ ಸಿಡಿಎಸ್ ಬಿಪಿನ್ ರಾವತ್ ರವರಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಕಾರ್ಯಕ್ರಮ ಕಾರ್ನಾಡ್ ಶ್ರೀರಾಮ ಸೇವಾ ಮಂಡಳಿ ವತಿಯಿಂದ ಕಾರ್ನಾಡ್ ದೇಶಭಕ್ತ ಸದಾಶಿವ ರಾವ್ ಸರ್ಕಲ್ ನಲ್ಲಿ ನಡೆಯಿತು.
ಈ ಸಂದರ್ಭ ನಿವೃತ್ತ ಯೋಧ ನಾರಾಯಣ ರೈ ಕುಬೆವೂರು ಮಾತನಾಡಿ ರಕ್ಷಣಾ ಮುಖ್ಯಸ್ಥರಾದ ಸಿಡಿಎಸ್ ಬಿಪಿನ್ ರಾವತ್ ರವರು ರಾಷ್ಟ್ರದ ಹಿತಾಸಕ್ತಿಗಾಗಿ ಮಾಡಿದ ಸೇವೆಗಳು ಅನುಕರಣೀಯವಾಗಿದ್ದು ಮತ್ತಷ್ಟು ಯುವಕರು ಸೇನೆಗೆ ಸೇರುವ ಮೂಲಕ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುವ ಕೆಲಸವಾಗಬೇಕು ಎಂದರು.
ಮುಲ್ಕಿ ನ ಪಂ. ಸದಸ್ಯ ಹರ್ಷರಾಜ ಶೆಟ್ಟಿ,ವಿಶ್ವ ಹಿಂದೂ ಪರಿಷತ್ ಮುಲ್ಕಿ ಪ್ರಖಂಡ ಕಾರ್ಯದರ್ಶಿ ಶ್ಯಾಮ್ ಸುಂದರ್ ಶೆಟ್ಟಿ, ಮಾತನಾಡಿದರು.
ಮುಲ್ಕಿ ವಿಜಯ ರೈತ ಸೊಸೈಟಿ ಅಧ್ಯಕ್ಷ ರಂಗನಾಥ ಶೆಟ್ಟಿ,,ವಿನೋದ್ ಸಾಲ್ಯಾನ್ ಬೆಳ್ಳಾಯರು, ರೊ.ಅಶೋಕ್ ಕುಮಾರ್ ಶೆಟ್ಟಿ, ಕಾರ್ನಾಡ್ ಶ್ರೀರಾಮ ಸೇವಾ ಮಂಡಳಿಯ ಅಧ್ಯಕ್ಷ ಭಾಸ್ಕರ ಶೆಟ್ಟಿಗಾರ್, ದಿನೇಶ್ ಶೆಟ್ಟಿ ಎಸ್.ಕೆ. ಪಿ.ಎ.ಮುಲ್ಕಿ ವಲಯದ ಅಧ್ಯಕ್ಷ ಶಿವರಾಮ್ ಕಾರ್ನಾಡ್ , ಕಿಶೋರ್ ಕಾರ್ನಾಡು, ಶಂಕರ್ ಮಾಸ್ಟರ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
14/12/2021 06:25 pm