ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ನಡೆಸುವ ಮಾಂಜದ ಗೋಶಾಲೆಯಲ್ಲಿ ಕಿನ್ನಿಗೋಳಿಯ ಸಜ್ಜನ ಬಂಧುಗಳ ಸಂಯೋಜನೆಯಲ್ಲಿ ಗೋಪೂಜೆ ನಡೆಯಿತು.
ಅರ್ಚಕ ಅನಂತ ಆಸ್ರಣ್ಣ ಗೋವುಗಳಿಗೆ ಆರತಿ ಬೆಳಗಿದರು. ಕರ್ನಾಟಕ ಬ್ಯಾಂಕಿನ ಎಂಡಿ ಮಹಾಬಲೇಶ್ವರ ಎಂ.ಎಸ್. ಸಹಿತ ನೆರೆದಿದ್ದ ಭಕ್ತರು ಗೋವುಗಳಿಗೆ ಹೂವು ಹಾಕಿ ಪಂಚಕಜ್ಜಾಯ, ದೋಸೆ ಇತ್ಯಾದಿಗಳನ್ನು ನೀಡಿದರು.
ಗೋಶಾಲೆಯಲ್ಲಿ ನೂತನವಾಗಿ ಅಳವಡಿಸಿದ ಇಂಟರ್ ಲಾಕ್ ಕಾಮಗಾರಿಯನ್ನು ಉದ್ಘಾಟಿಸಿದ ಮಹಾಬಲೇಶ್ವರ ಎಂ.ಎಸ್. ಗೋಶಾಲೆಗೆ ರೂ. ಎರಡೂವರೆ ಲಕ್ಷ ರೂಪಾಯಿ ಕೊಡುಗೆಯನ್ನು ಹಸ್ತಾಂತರಿಸಿದರು. ಗೋವುಗಳನ್ನು ನೋಡಿಕೊಳ್ಳುವ ಸಿಬಂದಿಗಳನ್ನು ಗೌರವಿಸಲಾಯಿತು. ಬಳಿಕ ಮಾತನಾಡಿದ ಅವರು ಕಟೀಲು ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಹೇಳಿದರು.
ಕಟೀಲು ದೇಗುಲದ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಸನತ್ ಕುಮಾರ ಶೆಟ್ಟಿ, ಅರ್ಚಕ ಶ್ರೀಹರಿ ಆಸ್ರಣ್ಣ, ಬಿಪಿನ್ ಪ್ರಸಾದ್, ಲೋಕಯ್ಯ ಸಾಲ್ಯಾನ್, ದೊಡ್ಡಯ್ಯ ಮೂಲ್ಯ ಕಿರಣ್ ಶೆಟ್ಟಿ ಸಚ್ಚಿದಾನಂದ ಉಡುಪ, ಸಜ್ಜನ ಬಂಧುಗಳ ಸಂಘಟನೆಯ ರಘುನಾಥ ಕಾಮತ್, ಜನಾರ್ದನ ಕಿಲೆಂಜೂರು ದೇವದಾಸ ಮಲ್ಯ ಅಭಿಲಾಷ್ ಶೆಟ್ಟಿ ಗೀತಾ, ಸರೋಜಿನಿ, ದಾಮೋದರ ಶೆಟ್ಟಿ, ಪುರುಷೋತ್ತಮ ಕೋಟ್ಯಾನ್, ತಿಮ್ಮಪ್ಪ ಕೋಟ್ಯಾನ್ ಸ್ವರಾಜ್ ಶೆಟ್ಟಿ ಪ್ರಕಾಶ್ ಆಚಾರ್ ಮತ್ತಿತರರಿದ್ದರು.
Kshetra Samachara
13/11/2021 09:58 pm