ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿಸೆಂಬರ್ 26ರಂದು ಮುಲ್ಕಿ ಸೀಮೆ ಅರಸು ಕಂಬಳ

ಮುಲ್ಕಿ: ಮುಲ್ಕಿ ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆ ಅರಸು ಕಂಬಳ ಸೀಮೆ ಅರಸರಾದ ದುಗ್ಗಣ್ಣ ಸಾವಂತರ ನೇತೃತ್ವ ಹಾಗೂ ಮಾರ್ಗದರ್ಶನಲ್ಲಿ ಡಿಸೆಂಬರ್ 26ರಂದು ನಡೆಯಲಿದೆ ಎಂದು ಕಂಬಳ ಸಮಿತಿಯ ರಾಮಚಂದ್ರನಾಯಕ್ ಸಭೆಯಲ್ಲಿ ತಿಳಿಸಿದರು.

ಅವರು ಪಡು ಪಣಂಬೂರಿನ ಮುಲ್ಕಿ ಅರಮನೆಯಲ್ಲಿ ನಡೆದ ಮುಲ್ಕಿ ಸೀಮೆ ಅರಸು ಕಂಬಳ ಸಮಿತಿಯ ಸಭೆಯಲ್ಲಿ ಮಾತನಾಡಿದರು.

ಕಂಬಳ ಸಮಿತಿಯ ಚಂದ್ರಶೇಖರ್ ಮಾತನಾಡಿ ಮುಂದಿನ ದಿನಗಳಲ್ಲಿ ಕಂಬಳ ಸುಸೂತ್ರವಾಗಿ ನಡೆಯಲು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು ಎಂದರು.

ಈ ಸಂದರ್ಭ ಸಮಿತಿಯ ಪದಾಧಿಕಾರಿಗಳಾದ ವಿಜಯಕುಮಾರ್ ಶೆಟ್ಟಿ, ಗೌತಮ್ ಜೈನ್ ಮುಲ್ಕಿ ಅರಮನೆ, ಶಶೀಂದ್ರ ಸಾಲ್ಯಾನ್, ಕೃಷ್ಣ ಹೆಬ್ಬಾರ್, ಮನ್ಸೂರ್ ಹಳೆಯಂಗಡಿ, ಉಮೇಶ್ ಪೂಜಾರಿ, ದಿನೇಶ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

ನವೀನ್ ಎಡ್ಮೆಮಾರ್ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

31/10/2021 10:46 pm

Cinque Terre

2.44 K

Cinque Terre

0

ಸಂಬಂಧಿತ ಸುದ್ದಿ