ಸುರತ್ಕಲ್:ಹಿರಿಯ ಯಕ್ಷಗಾನ ಕಲಾವಿದ ವಾಸುದೇವ ಆಚಾರ್ಯ ಕುಳಾಯಿಯವರಿಗೆ ಶ್ರೀ ಕ್ಷೇತ್ರ ಗಣೇಶಪುರ ಮಹಾಗಣಪತಿ ದೇವಸ್ಥಾನದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಿತು. ಶ್ರೀ ಕ್ಷೇತ್ರದ ಪ್ರದಾನ ಅರ್ಚಕರಾದ ಸುನಿಲ್ ಭಟ್ ರವರು ಪ್ರಸಾದ ನೀಡಿ ಶುಭ ಹಾರೈಸಿದರು.
ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನ ಪ್ರಾಧ್ಯಾಪಕ ಡಾ| ರಾಮಚಂದ್ರ ಶೆಟ್ಟಿಗಾರ್, ಗಿರೀಶ್ ನಾವಡ ಗಣೇಶಪುರ, ಗುರಿಕಾರ ವೆಂಕಟೇಶ ಶೆಟ್ಟಿಗಾರ್, ಭಾಗವತ ಶಶಿಧರ್ ರಾವ್ ಚಿತ್ರಾಪು, ದೇವಳದ ಸಿಬ್ಬಂದಿ ಯಾದವ ಶೆಟ್ಟಿಗಾರ್ ಉಪಸ್ಥಿತರಿದ್ದರು
Kshetra Samachara
28/10/2021 10:45 pm