ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ನ ವತಿಯಿಂದ ಸುರತ್ಕಲ್ ಬ್ಲಾಕ್ , ಮಂಗಳೂರು ನಗರ ಬ್ಲಾಕ್ ಮತ್ತು ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಹಯೋಗದೊಂದಿಗೆ ಸಿ ಎ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ಸ್ಥಾನ ಪಡೆದ ಮಂಗಳೂರಿನ ವಿದ್ಯಾರ್ಥಿನಿ ರುತ್ ಕ್ಲೇರ್ ಡಿ ಸಿಲ್ವ ರವರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು .
ಈ ಸಂದರ್ಭ ದಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ಮಾತನಾಡಿ ರುತ್ ಕ್ಲೇರ್ ಡಿ ಸಿಲ್ವ ವಿಶೇಷ ಸಾಧನೆಯ ಮೂಲಕ ಭಾರತದ ಗರಿಮೆಯನ್ನು ವಿಶ್ವದಲ್ಲಿ ಪಸರಿಸಿದ್ದು ಇನ್ನಷ್ಟು ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು
ಈ ಸಂದರ್ಭ ವಿವಿಧ ಮಹಿಳಾ ಕಾಂಗ್ರೆಸ್ಸಿನ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
24/09/2021 08:02 pm