ಮುಲ್ಕಿ:ವಿಶ್ವ ಹಿಂದೂ ಪರಿಷತ್ ಬಜರಂಗದಳ ಮುಲ್ಕಿ ಪ್ರಖಂಡ ನಾಗಬ್ರಹ್ಮ ಶಾಖೆ ಹೊಸಕಾಡು ವತಿಯಿಂದ ಕೋಣಾಜೆ ಸಮೀಪದ ಪಜೀರಿನ ಗೋವನಿತಾಶ್ರಮ ಗೋಶಾಲೆಗೆ ಹಸಿ ಹುಲ್ಲನ್ನು ನೀಡಲಾಯಿತು.
ಈ ಸೇವಾ ಕಾರ್ಯದಲ್ಲಿ ಪ್ರಖಂಡದ ಅಧ್ಯಕ್ಷರಾದ ಕೆ.ವಿ.ಶೆಟ್ಟಿ, ಕಾರ್ಯದರ್ಶಿ ಶಾಮ್ ಸುಂದರ್ ಶೆಟ್ಟಿ, ಗೋರಕ್ಷಾ ಪ್ರಮುಖರಾದ ಅಮಿತ್ ರಾಜ್ ಶೆಟ್ಟಿ, ಕಾರ್ನಾಡು ಬಜರಂಗದಳದ ಸಂಚಾಲಕರಾದ ದೀಕ್ಷಿತ್ ಕುಮಾರ್ ,ರಾಜೇಶ್ ಎಸ್ಕೋಡಿ, ಹೊಸಕಾಡು ಘಟಕದ ವಿ.ಹಿಂ.ಪ. ಅಧ್ಯಕ್ಷರಾದ ಕಿಶೋರ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
29/08/2021 10:10 pm