ಮುಲ್ಕಿ: ಪಡುಪಣಂಬೂರು ಸಮೀಪದ ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ತೋಕೂರು ಶ್ರೀ ಗಜಾನನ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದೇವಸ್ಥಾನದ ಹತ್ತಿರದ ರಸ್ತೆಯ ಎರಡು ಬದಿಗಳಲ್ಲಿ ಮಣ್ಣು ಹಾಕಿ ಶ್ರಮದಾನ ನಡೆಸಲಾಯಿತು.
ಈ ಸಂದರ್ಭ ಸಂಸ್ಥೆಯ ಅಧ್ಯಕ್ಷ ನವೀನ್ ಶೆಟ್ಟಿಗಾರ್ ಮಾತನಾಡಿ, ಸ್ವಚ್ಛತೆ ಮೂಲಕ ಜಾತ್ರಾ ಮಹೋತ್ಸವ ಆಚರಿಸಿ ದೇವರ ಕೃಪೆಗೆ ಪಾತ್ರರಾಗಬಹುದು ಎಂದರು. ಸಂಘಟನೆ ಸದಸ್ಯರಾದ ಸಂಪತ್, ಲೋಕನಾಥ್, ಭಾಸ್ಕರ್, ಬಾಲಚಂದ್ರ, ಹರೀಶ್, ಸುರೇಶ್, ಶ್ರೀನಾಥ್, ಸತೀಶ್, ರಿತೇಶ್, ಶ್ರವಣ್, ಸದಾನಂದ ಶ್ರಮದಾನದಲ್ಲಿ ಭಾಗವಹಿಸಿದರು.
Kshetra Samachara
28/02/2021 09:57 pm