ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: 'ಒನಕೆ ಓಬವ್ವ ಮತ್ತು ಸ್ಥಳೀಯ ಚರಿತ್ರೆ'; ವಿಶೇಷ ಉಪನ್ಯಾಸ

ಬಂಟ್ವಾಳ: ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಒನಕೆ ಓಬವ್ವ ಅಧ್ಯಯನ ಪೀಠ ಹಾಗೂ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಹಯೋಗದಲ್ಲಿ 'ಒನಕೆ ಓಬವ್ವ ಮತ್ತು ಸ್ಥಳೀಯ ಚರಿತ್ರೆ' ಉಪನ್ಯಾಸ ನಡೆಯಿತು.

ಅಧ್ಯಕ್ಷತೆ ವಹಿಸಿ ಹಂಪಿ ಕನ್ನಡ ವಿವಿ ಕುಲಪತಿ ಡಾ. ಸ.ಚಿ.ರಮೇಶ್ ಮಾತನಾಡಿ, ಪರಂಪರೆ- ಚರಿತ್ರೆ ಅಧ್ಯಯನ ಮಾಡುವುದರಿಂದ ಉನ್ನತ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯ. ತುಳುನಾಡಿನಲ್ಲಿ ಯಕ್ಷಾರಾಧನೆ ಜತೆಗೆ ದೈವಾರಾಧನೆ, ನಾಗಾರಾಧನೆಯನ್ನೂ ಅಧ್ಯಯನ ಮಾಡುವ ಅಗತ್ಯವಿದೆ. ದೈವಾರಾಧನೆಯಲ್ಲಿ ಬರುವ ಪಾಡ್ದನ, ನುಡಿಕಟ್ಟು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಡಾ.ತುಕಾರಾಮ ಪೂಜಾರಿಯವರು ಇಡೀ ತುಳುನಾಡಿನ ಚರಿತ್ರೆಯನ್ನು ಈ ವಸ್ತು ಸಂಗ್ರಹಾಲಯದ ಮೂಲಕ ತೆರೆದಿಟ್ಟಿದ್ದಾರೆ ಎಂದು ಶ್ಲಾಘಿಸಿದರು.

ಸುರತ್ಕಲ್ ಗೋವಿಂದದಾಸ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಬಿ.ವೈ.ಕುಮಾರ್ ವಿಶೇಷ ಉಪನ್ಯಾಸ ನೀಡಿ, ಓಬವ್ವ ಮಾಡಿದ ಸಾಧನೆ ಇಡೀ ಮನುಕುಲಕ್ಕೆ ಮಾದರಿಯಾಗಿ ಕಾಣಿಸಿಕೊಳ್ಳುತ್ತದೆ ಎಂದರು.

ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಮ ಪೂಜಾರಿ ಅವರು ಸ್ಥಳೀಯ ಚರಿತ್ರೆಯ ಕುರಿತು ವಿಚಾರ ತಿಳಿಸಿದರು. ವೇದಿಕೆಯಲ್ಲಿ ಮಂಗಳೂರು ಎಂಆರ್ ಪಿಎಲ್ ನ ಸಿಎಸ್ಆರ್ ವಿಭಾಗದ ಉಪಮಹಾಪ್ರಬಂಧಕಿ ವೀಣಾ ಶೆಟ್ಟಿ, ಬಂಟ್ವಾಳ ವಿಶೇಷ ಮಕ್ಕಳ ಪಾಲನಾ ಕೇಂದ್ರ 'ನಿರ್ಮಲ ಹೃದಯ' ಸಂಚಾಲಕ ದಾಮೋದರ್ ಬಿ.ಎಂ. ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಎ.ದಾಮೋದರ್, ಪತ್ರಿಕಾ ವಿತರಕ ನರಸಿಂಹ ಪೈ ಅವರನ್ನು ಸನ್ಮಾನಿಸಲಾಯಿತು. ಹಂಪಿ ಕನ್ನಡ ವಿವಿಯ ಒನಕೆ ಓಬವ್ವ ಅಧ್ಯಯನ ಪೀಠದ ಸಂಚಾಲಕ ಡಾ. ಎ.ಶ್ರೀಧರ್ ಪ್ರಸ್ತಾವನೆಗೈದರು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಡಾ. ಆಶಾಲತಾ ಎಸ್.ಸುವರ್ಣ ಸ್ವಾಗತಿಸಿದರು. ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಜಾನಪದ ನೃತ್ಯ ಪ್ರಸ್ತುತ ಪಡಿಸಿದರು.

Edited By : Vijay Kumar
Kshetra Samachara

Kshetra Samachara

27/02/2021 04:38 pm

Cinque Terre

1.67 K

Cinque Terre

0

ಸಂಬಂಧಿತ ಸುದ್ದಿ