ಮುಲ್ಕಿ: ಅಂಗನವಾಡಿ ಆರಂಭಕ್ಕೆ ಪೂರ್ವಭಾವಿ ಯಾಗಿ ಅತಿಕಾರಿ ಬೆಟ್ಟು ಗ್ರಾಪಂ ವ್ಯಾಪ್ತಿಯ ಮೈಲೊಟ್ಟು, ಕಕ್ವ, ಶಿಮಂತೂರು, ಪಂಜಿನಡ್ಕ ಅಂಗನವಾಡಿ ಕೇಂದ್ರಗಳಿಗೆ ಸ್ಯಾನಿಟೈಸರ್ ಸಿಂಪಡಿಸಲಾಯಿತು.
ಈ ಸಂದರ್ಭ ಅತಿಕಾರಿ ಬೆಟ್ಟು ಪಂಚಾಯಿತಿ ಪಿಡಿಒ ರವಿಕುಮಾರ್ ಮಾತನಾಡಿ, ಕೊರೊನಾ ನಿಯಂತ್ರಣದ ಬಳಿಕ ಸದ್ಯದಲ್ಲಿ ಅಂಗನವಾಡಿ ಕೇಂದ್ರಗಳು ತೆರೆಯಲಿದ್ದು, ಮಕ್ಕಳ ಆರೋಗ್ಯ ರಕ್ಷಣೆ ಪಂಚಾಯಿತಿ ಆಡಳಿತದ ಕರ್ತವ್ಯವಾಗಿದೆ. ಈ ಬಗ್ಗೆ ಪೂರ್ವಭಾವಿಯಾಗಿ ಸ್ಯಾನಿಟೈಸರ್ ಸಿಂಪಡಿಸಲಾಗಿದೆ ಎಂದರು.
ಪಂಚಾಯಿತಿ ಅಧ್ಯಕ್ಷ ಮನೋಹರ ಕೋಟ್ಯಾನ್ ಮಾತನಾಡಿ, ಅತಿಕಾರಿಬೆಟ್ಟು ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಲಾಗಿದ್ದು, ಕೊರೊನಾ ಎಚ್ಚರಿಕೆಯ ಮೂಲಕ ಶಾಲೆಗಳು, ಅಂಗನವಾಡಿ ಕೇಂದ್ರಗಳು ಸಭೆ-ಸಮಾರಂಭಗಳು ನಡೆಯಲಿದೆ ಎಂದರು. ಪಂ. ಲೆಕ್ಕಿಗ ಯೋಗೀಶ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
25/02/2021 07:51 pm