ಮುಲ್ಕಿ: ಮಳೆಗಾಲದಲ್ಲಿ ನೀರನ್ನು ಇಂಗಿಸಬೇಕು. ಮಿತವಾಗಿ ನೀರಿನ ಬಳಕೆಯನ್ನು ಮಾಡಿದಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ ಎಂದು ಮಂಗಳೂರು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಜಗದೀಶ ಬಾಳ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ "ಜಲ ಬಿಕ್ಕಟ್ಟು ಸಮಸ್ಯೆಗಳು ಮತ್ತು ಪರಿಹಾರಗಳು" ವಿಷಯದ ಬಗ್ಗೆ ಸಮಾಜಮುಖಿ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಡಿಯೋ ಪ್ರಾತ್ಯಕ್ಷಿಕೆ ಮೂಲಕ ನೀರಿನ ಅವಶ್ಯಕತೆ, ಉಳಿಕೆ, ಅಗತ್ಯತೆ, ಸ್ವಚ್ಛತೆಗಳ ಬಗ್ಗೆ ಜನಜಾಗೃತಿ ಮೂಡಿಸಲಾಯಿತು.
ಕಟೀಲು ದೇವಳ ಅರ್ಚಕ ಶ್ರೀಹರಿ ನಾರಾಯಣದಾಸ ಆಸ್ರಣ್ಣ, ಕಟೀಲು ಕಾಲೇಜಿನ ಪ್ರಾಚಾರ್ಯ ಡಾ. ಕೃಷ್ಣ ಕಾಂಚನ್, ಎನ್‌ಎಸ್‌ಎಸ್ ಯೋಜನಾಧಿಕಾರಿ ಪರಮೇಶ್ವರ್ ಸಿ.ಎಚ್., ಕಿನ್ನಿಗೋಳಿ ರೋಟರಿ ಅಧ್ಯಕ್ಷ ಯಶವಂತ, ಕಟೀಲ್ ಎಕ್ಕಾರು ಲಯನ್ಸ್ ಅಧ್ಯಕ್ಷ ಸ್ಟ್ಯಾನಿ ಪಿಂಟೋ, ಗಿಡಿಗೆರೆ ಶ್ರೀ ದುರ್ಗಾಂಬಿಕಾ ಯುವಕ- ಯುವತಿ ಮಂಡಲದ ಗೌರವಾಧ್ಯಕ್ಷ ನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.
ಉಪನ್ಯಾಸಕ ಡಾ. ವಿಜಯ ವಿ. ಸ್ವಾಗತಿಸಿದರು. ಸಂತೋಷ್ ಆಳ್ವ ನಿರೂಪಿಸಿದರು.
Kshetra Samachara
25/02/2021 05:09 pm