ಮುಲ್ಕಿ :ಸಮಾಜದಲ್ಲಿ ಒಬ್ಬಉತ್ತಮ ಪ್ರಜೆಯಾಗಿ ಮಾನವೀಯ ಮೌಲ್ಯಗಳನ್ನು ಹೊಂದಿದ ವ್ಯಕ್ತಿಯಾಗಿ ರೂಪುಗೊಳಿಸುವ ಕಾರ್ಯ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆ ಮೂಲಕ ನಡೆಯುತ್ತಿದೆಯೆಂದು ತುಂಬೆ ಬಿ.ಎ. ಐ.ಟಿ.ಐ ಕಾಲೇಜಿನ ಪ್ರಾಂಶುಪಾಲ ನವೀನ್‌ಕೆ.ಎಸ್. ಹೇಳಿದರು.
ಅವರು ಕಿನ್ನಿಗೋಳಿ ಸಮೀಪದ ಐಕಳದ ಪೊಂಪೈ ಕಾಲೇಜಿನಲ್ಲಿ ಜರಗಿದ ಕಾಲೇಜಿನ ೨೦೨೦-೨೧ ನೇ ಸಾಲಿನ ಎನ್.ಎಸ್.ಎಸ್. ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪನ್ಯಾಸಕ ಪ್ರೊ.ಯೋಗೀಂದ್ರ ಬಿ ವಹಿಸಿದ್ದು ಕಾಲೇಜಿನ ಪ್ರಾಚಾರ್ಯ ಡಾ|ಪುರುಷೋತ್ತಮ ಕೆ ವಿ,.ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಪ್ರೊ.ನೇಮಿಚಂದ್ರಗೌಡ, ಸಹ ಅಧಿಕಾರಿ ವಿನಯ್ ಎ. ಸಿಕ್ವೇರಾ, ವಿದ್ಯಾರ್ಥಿ ನಾಯಕ ಗಗನ್‌ರಾಜ್ ಸ್ನೇಹಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಜೋಯ್ಲಿನ್ ಕೊರೊಡೇಲೊ ಸ್ವಾಗತಿಸಿದರು, ಲೊಲಿಟಾರವರು ವಂದಿಸಿದರು,ನಿಶಾ ಲೋಬೋ ಕಾರ್ಯಕ್ರಮ ನಿರೂಪಿಸಿದರು.
Kshetra Samachara
19/02/2021 02:10 pm