ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕಲಾವಿದ ವೆಂಕಿ ಫಲಿಮಾರ್ ತಂಡದಿಂದ ಛತ್ರಪತಿ ಶಿವಾಜಿ ಕೊಲಾಜ್ ಚಿತ್ರಣ; ಫೆ.21ರಂದು ಅನಾವರಣ

ಮುಲ್ಕಿ: ಚಿತ್ರ ಕಲಾವಿದ ವೆಂಕಿ ಫಲಿಮಾರ್ ನೇತೃತ್ವದಲ್ಲಿ ಫಲಿಮಾರಿನ ಚಿತ್ರಾಲಯ ಆರ್ಟ್ ಗ್ಯಾಲರಿ ಹಾಗೂ 'ವರ್ಣ 20' ಸಹಭಾಗಿತ್ವದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕೊಲಾಜ್ ರಚಿಸಲಾಗಿದೆ. ಸುಮಾರು 4 ಕ್ವಿಂಟಾಲ್ ವಾರ್ತಾ ಪತ್ರಿಕೆ, ಮ್ಯಾಗಝಿನ್ ಮತ್ತು 7 ಕೆ.ಜಿ. ಫೆವಿಕಾಲ್ ನಿಂದ ಹತ್ತು ದಿನಗಳ ಅವಧಿಯಲ್ಲಿ ಕಲಾವಿದರಾದ ವರ್ಣೀತಾ ಕಾಮತ್, ಪದ್ಮಾವತಿ ಕಾಮತ್, ರಾಧಿಕಾ ಭಟ್, ಶಕುಂತಲಾ ಶೆಣೈ, ಜ್ಯೋತಿ ಶೇಟ್, ಲಾರೆನ್ಸ್ ಪಿಂಟೋ, ಶ್ರವಣ್ ಕುಮಾರ್, ಉಷಾದೇವಿಯವರು ವೆಂಕಿ ಫಲಿಮಾರ್ ಮಾರ್ಗದರ್ಶನದಲ್ಲಿ ಈ ಕಲಾಕೃತಿ ತಯಾರಿಸಿದ್ದಾರೆ.

ಕಲಾಕೃತಿಯು 21 ಅಡಿ ಅಗಲ ಹಾಗೂ 31 ಅಡಿ ಎತ್ತರವಿದ್ದು, ಇದು ಒಂದು ವಿಶ್ವ ದಾಖಲೆ ಎನ್ನಬಹುದು. ಫೆ.21ರಂದು ಬಸ್ರೂರು ಕಾಲೇಜಿನ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ಚಕ್ರವರ್ತಿ ಸೂಲಿಬೆಲೆ, ಸಂತೋಷ್ ಜಿ. ಹಾಗೂ ಪರ್ಯಾಯ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಕಲಾಕೃತಿ ಅನಾವರಣಗೊಳ್ಳಲಿದೆ. ಈ ಸಂದರ್ಭ ಸಾರ್ವಜನಿಕರ ವೀಕ್ಷಣೆಗೂ ಅವಕಾಶವಿದೆ ಎಂದು ಕಲಾವಿದ ವೆಂಕಿ ಫಲಿಮಾರ್ ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

16/02/2021 03:50 pm

Cinque Terre

9.43 K

Cinque Terre

0

ಸಂಬಂಧಿತ ಸುದ್ದಿ