ಬಂಟ್ವಾಳ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಬಂಟ್ವಾಳ ಜಂಟಿ ಆಶ್ರಯದಲ್ಲಿ ಬಿ.ಸಿ. ರೋಡಿನ ಗೋಲ್ಡನ್ ಪಾರ್ಕ್ ಮೈದಾನದ ಡಾ.ಎಪಿಜೆ ಅಬ್ದುಲ್ ಕಲಾಂ ವೇದಿಕೆಯಲ್ಲಿ ಶನಿವಾರದ ಮೂರನೇ ದಿನ ಇಸ್ಲಾಮಿನ ಸಾಂಸ್ಕೃತಿಕ ಕಲೆಯಾಗಿರುವ ದಫ್ ಕಲಾ ಪ್ರದರ್ಶನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಜಿಲ್ಲಾ ಮಟ್ಟದ ದಫ್ ಸ್ಪರ್ಧಾ ಕಾರ್ಯಕ್ರಮವನ್ನು ಇರ್ಶಾದ್ ದಾರಿಮಿ ಅಲ್-ಜಝರಿ ಉದ್ಘಾಟಿಸಿದರು. ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಶಾಫಿ ಸಅದಿ ನಂದಾವರ ಮುಖ್ಯ ಭಾಷಣಗೈದರು. ಎಸ್ಸೆಸ್ಸೆಫ್ ರಾಷ್ಟ್ರೀಯ ಅಧ್ಯಕ್ಷ ಕೆ.ಎಂ. ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ಬಂಟ್ವಾಳ ಪುರಸಭೆ ಸದಸ್ಯ ಲುಕ್ಮಾನ್ ಬಿ. ಸಿ. ರೋಡ್, ದ.ಕ. ಮತ್ತು ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಉಪಾಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಪ್ರಧಾನ ಕಾರ್ಯದರ್ಶಿ ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಸದಸ್ಯರಾದ ಯು.ಮುಸ್ತಫಾ ಆಲಡ್ಕ, ಆರ್.ಕೆ. ಮದನಿ ಅಮ್ಮೆಂಬಳ, ಕಲೋತ್ಸವ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಪಂಜಿಕಲ್ಲು, ಗೌರವಾಧ್ಯಕ್ಷ ಪಿ.ಜಯರಾಮ ರೈ, ಚಿಣ್ಣರ ಲೋಕ ಟ್ರಸ್ಟ್ ಅಧ್ಯಕ್ಷ ಮೋಹನದಾಸ್ ಕೊಟ್ಟಾರಿ, ಉದ್ಯಮಿ ಜಗನ್ನಾಥ ಚೌಟ, ಕಲೋತ್ಸವ ಸಮಿತಿ ಗೌರವ ಸಲಹೆಗಾರರಾದ ಪ್ರಕಾಶ್ ಶೆಟ್ಟಿ ಶ್ರೀ ಶೈಲ ತುಂಬೆ, ರತ್ನದೇವ ಪೂಂಜಾಲಕಟ್ಟೆ, ನಿರ್ದೇಶಕ ಶಿವಪ್ರಸಾದ್ ಬಂಟ್ವಾಳ, ನ್ಯಾಯವಾದಿ ಉಮೇಶ್ ಕುಮಾರ್ ವೈ ಮೊದಲಾದವರು ಭಾಗವಹಿಸಿದ್ದರು.
ಕರಾವಳಿ ದಫ್ ಸ್ಪರ್ಧಾ ಕಾರ್ಯಕ್ರಮ ಸಂಚಾಲಕ ಮುಹಮ್ಮದ್ ನಂದಾವರ ಸ್ವಾಗತಿಸಿದರು. ದಫ್ ಎಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಲತೀಫ್ ನೇರಳಕಟ್ಟೆ ವಂದಿಸಿ, ನಿರೂಪಿಸಿದರು.
Kshetra Samachara
15/02/2021 04:17 pm