ಮುಲ್ಕಿ: ಮುಲ್ಕಿ ರೋಟರಿ ಕ್ಲಬ್ ಗೆ ಡಿಸ್ಟ್ರಿಕ್ಟ್ ಗವರ್ನರ್ ಎಂ ರಂಗನಾಥ ಭಟ್ ಭೇಟಿ ನೀಡಿ ಅನೇಕ ಸಮಾಜ ಮುಖಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಸಾಧಕರನ್ನು ಗೌರವಿಸುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಅವರು ಮಾತನಾಡಿ ಸಮಾಜಸೇವೆಗೆ ಉತ್ಸಾಹ ಹಾಗೂ ಧೈರ್ಯ ಮುಖ್ಯವಾಗಿದ್ದು ಮುಲ್ಕಿ ರೋಟರಿ ಕ್ಲಬ್ ನ ಸಮಾಜಮುಖೀ ಕಾರ್ಯಗಳು ಶ್ಲಾಘನೀಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ರಜನಿ ಭಟ್, ವಲಯ 3ರ ಸಹಾಯಕ ಗವರ್ನರ್ ಏಕನಾಥ ದಂಡ ಕೇರಿ, ವಲಯ ಸೇನಾನಿ ನಾರಾಯಣ್,ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ಗೋಪಾಲ ಭಂಡಾರಿ, ವೈ ಎನ್ ಸಾಲ್ಯಾನ್, ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂದರ್ಭದಲ್ಲಿ ಸಾಧಕರ ನೆಲೆಯಲ್ಲಿ ಮಂಗಳೂರು ಐ ಎಂ ಎ ಅಧ್ಯಕ್ಷರಾದ ಡಾ. ಅಚ್ಚುತ ಕುಡ್ವ ಮುಲ್ಕಿ,,2019- 20ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶಿಕ್ಷಕಿ ಶೋಭಾ ಯು, ಮುಲ್ಕಿ ಹೋಬಳಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಅವಿಶ ಬಿ ಶೆಟ್ಟಿ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತ್ಯಧಿಕ ಅಂಕ ಗಳಿಸಿದ ರಾಜೇಶ್ ಬಿ.ಆಚಾರ್ಯ ರವರನ್ನು ಗೌರವಿಸಲಾಯಿತು.ಹಾಗೂ ರಂಗನಾಥ್ ಭಟ್ ದಂಪತಿಗಳನ್ನು ಸನ್ಮಾನಿಸಲಾಯಿತು. ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ವೈಎನ್ ಸಾಲ್ಯಾನ್ ಧನ್ಯವಾದ ಅರ್ಪಿಸಿದರು.
Kshetra Samachara
10/02/2021 10:26 pm