ಮುಲ್ಕಿ: ಸಾಧನೆ ಸಹಕಾರ ಕಾರ್ಯಗಳು ಸ್ವಾರ್ಥ ರಹಿತವಾಗಿ ಸಮಾಜಮುಖಿಯಾಗಿದ್ದರೆ ಆ ವ್ಯಕ್ತಿ ಜನಮಾನಸದಲ್ಲಿ ಸದಾ ಗೌರವಿಸಲ್ಪಡುತ್ತಾರೆ ಎಂದು ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿ ಸಂಘಟನೆ (ಎಲ್‌ಐಸಿ ಎಒಐ)ಯ ರಾಜ್ಯ ಅಧ್ಯಕ್ಷ ರಮೇಶ್ ಕುಮಾರ್ ಹೇಳಿದರು.
ಸುರತ್ಕಲ್ ಸೂರಜ್ ಇಂಟರ್‌ನ್ಯಾಷನಲ್‌ನಲ್ಲಿ ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿ ಸಂಘಟನೆಯ ಘಟಕದ ಪ್ರತಿನಿಧಿಗಳಿಂದ ಇತ್ತೀಚೆಗೆ ಎಲ್‌ಐಸಿ ಸೇವೆಯಿಂದ ನಿವೃತ್ತರಾದ ಅಭಿವೃದ್ಧಿ ಅಧಿಕಾರಿ ಲಿಯೋ ತಾವ್ರೋ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿನಂದಿಸಿ ಮಾತನಾಡಿ, ತಾವ್ರೋ ಅವರು ಕಳೆದ ೩೫ ವರ್ಷಗಳ ಸಾರ್ಥಕ ಸೇವೆಯಲ್ಲಿ ತಾವೂ ಬೆಳೆದಂತೆ ಪ್ರತಿನಿಧಿಗಳನ್ನು ಸ್ವಾವಲಂಭಿಗಳನ್ನಾಗಿಸಿ ಬೆಳೆಸಿದ್ದಾರೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ನಿಗಮದ ಮೂಲ್ಕಿ ಶಾಖಾಧಿಕಾರಿ ದುರ್ಗಾರಾಮ ಶೆಣೈ ವಹಿಸಿದ್ದರು. ಉಪ ಶಾಖಾಧಿಕಾರಿ ಸೋಮಸುಂದರ್, ಫೆಲಿಕ್ಸ್ ತಾವ್ರೋ, ಸುರೇಶ್ ಶೆಣೈ, ಗುಲಾಬಿ ಸುರೇಂದ್ರ, ಹರ್ಷರಾಜ ಶೆಟ್ಟಿ ಜಿಎಂ, ವಿಜಯ ಕುಮಾರ್ ಕುಬೆವೂರು, ಗಿರೀಶ್ ಕುಮಾರ್ ತಾವ್ರೋ ಅವರನ್ನು ಅಭಿನಂದಿಸಿ ಮಾತನಾಡಿದರು. ಈ ಸಂದರ್ಭ ಅಭಿವೃದ್ಧಿ ಅಧಿಕಾರಿ ಲಿಯೋ ತಾವ್ರೋ ದಂಪತಿಗಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
Kshetra Samachara
03/02/2021 09:49 am