ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿಲ್ಪಾಡಿ: ನಮ್ಮ ನಡಿಗೆ ತ್ಯಾಜ್ಯಮುಕ್ತ ಕಡೆಗೆ ಕಾರ್ಯಕ್ರಮಕ್ಕೆ ಚಾಲನೆ

ಮುಲ್ಕಿ: ಕಿಲ್ಪಾಡಿ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಗ್ರಾಮ ವಿಕಾಸ ಸಮಿತಿ ಕೆರೆಕಾಡು, ಯೂಥ್ ಫ್ರೆಂಡ್ಸ್ ಕೆರೆಕಾಡು ಸಹಯೋಗದಲ್ಲಿ ನಮ್ಮ ನಡಿಗೆ ತ್ಯಾಜ್ಯ ಮುಕ್ತ ಕಡೆಗೆ ಸ್ವಚ್ಛತಾ ಕಾರ್ಯಕ್ರಮವು ನಡೆಯಿತು.

ಈ ಸಂದರ್ಭ ಕಿಲ್ಪಾಡಿ ಪಂಚಾಯತ್ ಸದಸ್ಯರಾದ ವಿಕಾಸ್ ಶೆಟ್ಟಿ ಮಾತನಾಡಿ ಸ್ವಚ್ಛತೆಯ ನಿಯಮಗಳನ್ನು ಪಾಲಿಸಿದರೆ ಕೊರೊನಾ ಸಹಿತ ಮಾರಕ ರೋಗಗಳ ನಿರ್ಮೂಲನೆ ಮೂಲಕ ಆರೋಗ್ಯವಂತ ಗ್ರಾಮ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ದಮಯಂತಿ ಶೆಟ್ಟಿಗಾರ್, ರಾಜೇಶ್ ಕೋಟ್ಯಾನ್, ದಿನೇಶ್ ಆಚಾರ್ಯ ಶಾಂತ,ಲಲಿತಾ ಯಾದವ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರಿಶ್ಚಂದ್ರ ಮತ್ತು ಸಿಬ್ಬಂದಿ, ಮಾದವ ಶೆಟ್ಟಿಗಾರ್, ಹರ್ಷ ಕೆರೆಕಾಡ್, ಲಕ್ಷ್ಮಣ್ ಪೂಜಾರಿ, ಸುಂಧರ್ ಆಚಾರ್, ಪ್ರಶಾಂತ್ ಆಚಾರ್ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

Edited By : Vijay Kumar
Kshetra Samachara

Kshetra Samachara

01/02/2021 03:45 pm

Cinque Terre

2.51 K

Cinque Terre

0

ಸಂಬಂಧಿತ ಸುದ್ದಿ