ಮುಲ್ಕಿ: ಮುಲ್ಕಿಯ ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ದಲ್ಲಿ "ಹುತಾತ್ಮರ ದಿನ''ವನ್ನು ಆಚರಿಸಲಾಯಿತು.
ಸಹ ಶಿಕ್ಷಕಿ ಆಶಾಲತಾ ಅವರು ಹುತಾತ್ಮ ದಿನಾಚರಣೆಯ ಮಹತ್ವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿಯರಾದ ಪೂರ್ವಿಕ ಎಚ್. ಶೆಟ್ಟಿ ಹಾಗೂ ಶ್ರೀರಕ್ಷಾ ಪಿ. ಆಚಾರ್ಯ ಗಾಂಧೀಜಿ ಅವರ ಜೀವನ ಹಾಗೂ ಅವರ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಶಾಲಾ ಪ್ರಾಂಶುಪಾಲರಾದ ಚಂದ್ರಿಕಾ ಎಸ್. ಭಂಡಾರಿಯವರು ಮಾತನಾಡಿ, ನಮ್ಮ ದೇಶವನ್ನು ಕಾಪಾಡುವ ಸೈನಿಕರು ಹಾಗೂ ದೇಶಕ್ಕಾಗಿ ಮಡಿದ ವೀರ ಯೋಧರ ಬಲಿದಾನವನ್ನು ಸ್ಮರಿಸಿ, ಗೌರವಿಸಬೇಕು. ನಮ್ಮ ದೇಶದ ರಕ್ಷಣೆಗಾಗಿ ತಮ್ಮನ್ನು ತೊಡಗಿಸಿಕೊಳ್ಳಲು ಮಕ್ಕಳನ್ನು ಪ್ರೇರೇಪಿಸಿದರು. ಸಹ ಶಿಕ್ಷಕಿ ಕಾಮಾಕ್ಷಿ ಆರ್. ನಾಯಕ್ ವಂದಿಸಿದರು.
Kshetra Samachara
30/01/2021 03:45 pm