ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ದ.ಕ. ಜಿಲ್ಲಾ ಎನ್ಎಸ್ ಯುಐನಿಂದ 'ಕ್ಯಾಂಪಸ್ ಗೇಟ್ ಮೀಟ್' ಅಭಿಯಾನ

ಮಂಗಳೂರು: ಇಂದಿನಿಂದ ಒಂದು ತಿಂಗಳ ವರೆಗೆ ನಡೆಯಲಿರುವ ‘ಕ್ಯಾಂಪಸ್ ಗೇಟ್ ಮೀಟ್’ ಅಭಿಯಾನಕ್ಕೆ ಎನ್ಎಸ್ ಯುಐ ದ.ಕ.ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಅವರು ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಚಾಲನೆ ನೀಡಿದರು.

ದ.ಕ.ಜಿಲ್ಲಾ ಎನ್ಎಸ್ ಯುಐ ವತಿಯಿಂದ ಆಯೋಜಿಸಲಿರುವ ಈ ಅಭಿಯಾನದಲ್ಲಿ ಎನ್ಎಸ್ ಯುಐ ಪದಾಧಿಕಾರಿಗಳು ವಿವಿಧ ಕಾಲೇಜ್ ಕ್ಯಾಂಪಸ್ ಗೆ ತೆರಳಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಹೋರಾಟದ ಮುಖಾಂತರ ಬಗೆಹರಿಸಲಿರುವರು. ಅಲ್ಲದೆ, ಸ್ಕಾಲರ್ ಶಿಪ್, ಬಸ್ ಪಾಸ್, ಕಾಲೇಜು ಶುಲ್ಕ, ರ್ಯಾಗಿಂಗ್, ಮಾದಕ ದ್ರವ್ಯದ ಬಗ್ಗೆ ಜನ ಜಾಗೃತಿ ನಡೆಸಲಿದೆ ಎಂದು ಸವಾದ್ ಸುಳ್ಯ ಹೇಳಿದರು.

ಏಕಕಾಲದಲ್ಲಿ ಜಿಲ್ಲೆಯ ಸುಳ್ಯ, ಮೂಡುಬಿದಿರೆ, ಸುಬ್ರಹ್ಮಣ್ಯ, ಬಂಟ್ವಾಳ ತಾಲೂಕಿನ ಹಲವು ಕಾಲೇಜುಗಳಲ್ಲಿ ಇಂದು ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಮಂಗಳೂರು ಅಧ್ಯಕ್ಷ ಶೌನಕ್ ರೈ ಮನಾಲಿ, ಸುಳ್ಯ ಅಧ್ಯಕ್ಷ ಕೀರ್ತನ್ ಗೌಡ ಕೊಡಪಾಳ, ಆಶಿಕ್, ಪವನ್, ನಿಶಾಮ್, ಕೌಶಿಕ್ ಭಾಗವಹಿಸಿದರು.

Edited By : Nagaraj Tulugeri
Kshetra Samachara

Kshetra Samachara

25/01/2021 11:11 pm

Cinque Terre

2.56 K

Cinque Terre

0

ಸಂಬಂಧಿತ ಸುದ್ದಿ