ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಪೇಪರ್ ಸೀಡ್ ಸಂಸ್ಥೆಯ ಮಂಗಳೂರು ಬೊಂಬೆಗಳ ಉದ್ಘಾಟನೆ

ಮುಲ್ಕಿ: ಕೆಮ್ರಾಲ್ ಪಕ್ಷಿ ಕೆರೆಯ ನಿತಿನ್ ವಾಸ್ ನೇತೃತ್ವದ ಪೇಪರ್ ಸೀಡ್ ಸಂಸ್ಥೆಯು ಪರಿಸರಕ್ಕೆ ಹಿತವಾದ ಪೇಪರ್ ಮರುಬಳಕೆ ಮಾಡಿ ಅನೇಕ ವಸ್ತುಗಳನ್ನು ತಯಾರಿಸುವ ಪ್ರಯೋಗಗಳನ್ನು ಮಾಡುತ್ತ ಬಂದಿದೆ. ಸದ್ಯ ಅವರು ಮಾರುಕಟ್ಟೆಗೆ ಪರಿಚಯಿಸುತ್ತಿರುವ ಮಂಗಳೂರು ಬೊಂಬೆಗಳ ಉದ್ಘಾಟನೆಯನ್ನು ಖ್ಯಾತ ಪರಿಸರವಾದಿ, ಚಿತ್ರಕಲಾವಿದ, ಸಾಹಿತಿ ದಿನೇಶ್ ಹೊಳ್ಳ ನಡೆಸಿಕೊಟ್ಟರು.

ಅತ್ತೂರು ಕಿಲೆಂಜೂರಿನಲ್ಲಿ ನಂದಿನಿ ನದಿಯ ತಟದಲ್ಲಿ ಪುಚ್ಚಾಡಿ ಅಣೆಕಟ್ಟಿನ ಪಕ್ಕ ಗದ್ದೆ ತೋಟಗಳ ನಡುವೆ ನಡೆದ ಸಮಾರಂಭದಲ್ಲಿ ಗೊಂಬೆಗಳನ್ನು ಅನಾವರಣಗೊಳಿಸಲಾಯಿತು.

ದಿನೇಶ್ ಹೊಳ್ಳ ಮಾತನಾಡಿ, ನಿಸರ್ಗಕ್ಕೆ ಪೂರಕವಾದ ಹಾಗೂ ಹಾನಿಯಲ್ಲದ ಕೆಲಸ ಮಾಡುತ್ತಿರುವ ನಿತಿನ್ ವಾಸ್ ಎಲ್ಲರಿಗೂ ಮಾದರಿಯಾಗಲಿ, ಪ್ರೇರಣೆಯಾಗಲಿ. ಪ್ಲಾಸ್ಟಿಕ್ ಬಿಸಾಡುವ ಮನಸ್ಥಿತಿ ಬದಲಾಗಬೇಕಾದ ಅಗತ್ಯವಿದೆ. ಎಲ್ಲವೂ ನಮ್ಮ ರಿಮೋಟ್‌ನಲ್ಲೇ ಇರಬೇಕೆಂಬ ನಮ್ಮ ನಡುವಳಿಕೆ ಬದಲಾಗಲಿ. ಈಗ ಪ್ರಾಣಿ, ಪಕ್ಷಿಗಳ ಬೊಂಬೆಗಳನ್ನು ಕಾಣುತ್ತಿದ್ದೇವೆ. ಆದರೆ ಮುಂದೆ ಹೀಗೆ ಕೇವಲ ಬೊಂಬೆಗಳಲ್ಲಿ ಮಾತ್ರ ನೋಡದಂತಾಗಬಾರದು. ಪರಿಸರ ಉಳಿಸಿ ಜೀವಿಗಳನ್ನೂ ಉಳಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಜಿಲ್ಲಾ ಸಮನ್ವಯ ಅಧಿಕಾರಿ ರಘುವೀರ್ ಸೂಟರ್ ಪೇಟೆ ಪೇಪರ್ ಸೀಡ್ ಟ್ರಸ್ಟ್ ಉದ್ಘಾಟಿಸಿದರು. ಪರಿಸರವಾದಿಗಳಾದ ಜೀತ್ ಮಿಲನ್ ರೋಚೆ, ಮೂಡುಬಿದ್ರೆಯ ಶಿಲ್ಪಾ, ನಂದಾ ಪಾಯಸ್, ಜಾಕ್ಸನ್ ಮುಂತಾದವರಿದ್ದರು. ವಿನಯ್ ಕಾರ್ನಾಡ್, ದಯೇಶ್, ಮಂಜುಳಾ, ಶಾಲೆಟ್ ಕ್ಯಾಸ್ತಲಿನೋ ಹಾಡುಗಳನ್ನು ಹಾಡಿದರು. ರಹೀಂ ಬಿಸಿರೋಡು ವಾದ್ಯ ಸಂಗೀತ ನುಡಿಸಿದರು.

ರೀನಾ ಪೇಪರ್ ಸೀಡ್ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ತಿಳಿಸಿದರು. ಸಂಸ್ಥೆಯ ನಿತಿನ್ ವಾಸ್ ಮಾತನಾಡಿ ಟ್ರಸ್ಟ್ ಆಯ್ದ ಹಳ್ಳಿಗಳಲ್ಲಿ ಸ್ವ ಉದ್ಯೋಗ ಮಾಡಲು ಜನರಿಗೆ ತರಬೇತಿಗಳನ್ನು ನೀಡುತ್ತೇವೆ ಎಂದರು. ಅರ್ಪಿತಾ ಶೆಟ್ಟಿ ನಿರೂಪಿಸಿದರು.

Edited By : Vijay Kumar
Kshetra Samachara

Kshetra Samachara

25/01/2021 11:11 am

Cinque Terre

3.38 K

Cinque Terre

0

ಸಂಬಂಧಿತ ಸುದ್ದಿ