ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಕೊಡೆತ್ತೂರು ಆದರ್ಶ ಬಳಗ ವಾರ್ಷಿಕೋತ್ಸವ; ಹಿರಿಯ ಕೃಷಿಕರಿಗೆ ಗೌರವಾರ್ಪಣೆ

ಮುಲ್ಕಿ: ಗ್ರಾಮದ, ಸಮಾಜದ ಅಭಿವೃದ್ಧಿಯಲ್ಲಿ ಸಂಘ- ಸಂಸ್ಥೆಗಳ ಪಾತ್ರ ಮಹತ್ತರ ಎಂದು ಕೊಡೆತ್ತೂರು ದೇವಸ್ಯ ಮಠದ ಧರ್ಮದರ್ಶಿ ವೇದವ್ಯಾಸ ಉಡುಪ ಹೇಳಿದರು.

ಅವರು ಕೊಡೆತ್ತೂರುಗುತ್ತು ಬಳಿಯಲ್ಲಿ ಆದರ್ಶ ಬಳಗ ಕೊಡೆತ್ತೂರು ವಾರ್ಷಿಕೋತ್ಸವ ಹಾಗೂ ಕೊಡೆತ್ತೂರು ಶ್ರೀ ಕೋರ್‍ದಬ್ಬು ದೈವ ನೇಮದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಹಿರಿಯರಿಂದ ಬಂದ ಧಾರ್ಮಿಕ ಆಚರಣೆಗಳು, ಆಚಾರ- ವಿಚಾರಗಳನ್ನು ಗಾಳಿಗೆ ತೂರದೆ , ಹಿರಿಯರನ್ನು ಗೌರವಿಸುವ ಸಂಪ್ರದಾಯ ಇ ನ್ನೂ ಮುಂದುವರಿಯಬೇಕು ಎಂದರು.

ಈ ಸಂದರ್ಭ ಹಿರಿಯ ಕೃಷಿಕ ಜಯರಾಮ ಶೆಟ್ಟಿ ಬಾಕ್ಯರಕೋಡಿ ಅವರನ್ನು ಗೌರವಿಸಲಾಯಿತು. ನಿವೃತ್ತ ಶಿಕ್ಷಕ ಕೆ.ವಿ. ಶೆಟ್ಟಿ , ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಅರಸು ಕುಂಜರಾಯ ದೈವಸ್ಥಾನದ ಜಯರಾಮ ಮುಕ್ಕಾಲ್ದಿ , ಅಡಳಿತ ಮಂಡಳಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಜಯಂತ ಕರ್ಕೇರ ಅಡ್ಡಣಗುತ್ತು , ಪ್ರಕಾಶ್ ಶೆಟ್ಟಿ ಸಂಕಯ್ಯಬೆನ್ನಿ , ಉದ್ಯಮಿ ವಾಮನ ಕುಂದರ್, ಆದರ್ಶ ಬಳಗದ ಅಧ್ಯಕ್ಷ ಮಹೇಶ್ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು. ಜಿತೇಂದ್ರ ಶೆಟ್ಟಿ ಸ್ವಾಗತಿಸಿದರು. ಕೇಶವ ಕರ್ಕೇರ ನಿರೂಪಿಸಿದರು. ದಾಮೋದರ ಶೆಟ್ಟಿ ವಂದಿಸಿದರು. ಬಳಿಕ ಸಂಘದ ಸದಸ್ಯರಿಂದ "ಜಾಂಬವತಿ ಕಲ್ಯಾಣ" ಯಕ್ಷಗಾನ ಬಯಲಾಟ ನಡೆಯಿತು. ರಾತ್ರಿ ದೈವದ ನೇಮ ಜರುಗಿತು.

Edited By : Vijay Kumar
Kshetra Samachara

Kshetra Samachara

24/01/2021 03:37 pm

Cinque Terre

2.03 K

Cinque Terre

0

ಸಂಬಂಧಿತ ಸುದ್ದಿ