ಮಂಗಳೂರು: ಇಂದು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್‍ಚಂದ್ರ ಬೋಸ್ ಅವರ 125ನೇ ಜನ್ಮದಿನ.
ಈ ದಿನದ ನೆನಪನ್ನು ಅಮರವಾಗಿಸಲು 'ಸೋಲ್ಸ್ ರಿದಂ' ಎಂಬ ಯುವಕರ ತಂಡ ಸುಭಾಷ್‍ಚಂದ್ರ ಬೋಸ್ ಅವರ ಮೇಲೆ 'ಆಜಾದಿ' ಎಂಬ ಆ್ಯನಿಮೇಟೆಡ್ ವೀಡಿಯೊ ಸಾಂಗ್ ನಿರ್ಮಾಣ ಮಾಡುತ್ತಿದೆ. ಇಂದು ಪೋಸ್ಟರ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕನ್ನಡ ಹಾಗೂ ಹಿಂದಿ ಎರಡು ಭಾಷೆಯಲ್ಲಿ ಈ ವೀಡಿಯೊ ಸಾಂಗ್ ನಿರ್ಮಾಣವಾಗುತ್ತಿದ್ದು, ಕೆಜಿಎಫ್ ಖ್ಯಾತಿಯ ಐರಾ ಉಡುಪಿ ಎರಡೂ ಭಾಷೆಗಳಿಗೂ ಧ್ವನಿಯಾಗಲಿದ್ದಾರೆ. ಉತ್ಸಾಹಿ ಯುವ ನಿರ್ದೇಶಕ ಜಯಪ್ರಕಾಶ್ ಸಿ.ಎಸ್. ಅವರ ಪರಿಕಲ್ಪನೆಯಲ್ಲಿ ಈ ಆ್ಯನಿಮೇಟೆಡ್ ವೀಡಿಯೊ ಸಾಂಗ್ ನಿರ್ಮಾಣವಾಗುತ್ತಿದೆ. ಸಂದೇಶ್ ಬಾಬಣ್ಣ ಸಂಗೀತವಿರುವ ಕನ್ನಡ ಹಾಡಿನ ಸಾಹಿತ್ಯವನ್ನು ವಿಜೇಶ್ ದೇವಾಡಿಗ ರಚಿಸಿದರೆ, ಹಿಂದಿ ಹಾಡಿನ ಸಾಹಿತ್ಯವನ್ನು ಜಯಪ್ರಕಾಶ್ ಸಿ.ಎಸ್. ಹಾಗೂ ರೋಹಿತ್ ಕುಮಾರ್ ರಚಿಸಿದ್ದಾರೆ.
ಈ ಆ್ಯನಿಮೇಟೆಡ್ ವೀಡಿಯೊ ಸಾಂಗ್ ಸುಮಾರು 3.45 ನಿಮಿಷದೊಳಗೆ ಇದ್ದು, ಸುಭಾಷ್‍ಚಂದ್ರ ಬೋಸ್ ರ ಚಿಂತನೆ, ದಿಟ್ಟ ನಿರ್ಧಾರ, ಆಜಾದ್ ಹಿಂದ್ ಫೌಜ್ ಸ್ಥಾಪನೆಯ ಬಗ್ಗೆ ವಿಚಾರವನ್ನು ಇರಿಸಿ ಆ್ಯನಿಮೇಷನ್ ತಂತ್ರಜ್ಞಾನದ ಮೂಲಕ ಈ ವೀಡಿಯೊ ಸಾಂಗ್ ನಿರ್ಮಾಣ ಮಾಡಲಾಗುತ್ತಿದೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಬಿಡುಗಡೆಯಾಗಿದ್ದು, ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವೀಡಿಯೊ ಸಾಂಗ್ ಒಂದೆರಡು ತಿಂಗಳ ಒಳಗೆ ಬಿಡುಗಡೆಯಾಗಲಿದೆ ಎಂದು ಜಯಪ್ರಕಾಶ್ ಸಿ.ಎಸ್. ಮಾಹಿತಿ ನೀಡಿದರು.
Kshetra Samachara
23/01/2021 03:25 pm