ಮುಲ್ಕಿ: ಸುಮಾರು 55 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತನ್ನ ವಿಭಿನ್ನ ಕಲಾ ನೈಪುಣ್ಯತೆ ಮೆರೆಸಿದ ತೆಂಕು ತಿಟ್ಟಿನ ಹೆಸರಾಂತ ಕಲಾವಿದ ಸಂಪಾಜೆ ಶೀನಪ್ಪ ರೈಯವರು ಕಾಲಿನ ಗ್ಯಾಂಗ್ರಿನ್ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆಗೊಳಗಾಗಿ ಕಾಲಿನ ಹೆಬ್ಬೆರಳು ಕತ್ತರಿಸಲ್ಪಟ್ಟು ಮಾನಸಿಕವಾಗಿ ಕುಗ್ಗಿ ಖಿನ್ನತೆಗೊಳಗಾದ ವಿಚಾರವನ್ನು ಸುರತ್ಕಲ್ ಪಟ್ಲ ಫೌಂಡೇಶನ್ ಘಟಕದ ಮಾಧವ ಎಸ್ .ಶೆಟ್ಟಿ ಬಾಳ ಅವರು ಕೇಂದ್ರೀಯ ಸಮಿತಿಯ ಗಮನಕ್ಕೆ ತಂದಾಗ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರು ಕೇಂದ್ರೀಯ ಸಮಿತಿ ಪದಾಧಿಕಾರಿಗಳೊಂದಿಗೆ ಸಂಪಾಜೆ ಶೀನಪ್ಪ ರೈಯವರ ಮನೆಗೆ ತೆರಳಿ ಮಾನಸಿಕವಾಗಿ ನೊಂದಿರುವ ಅವರಿಗೆ ಧೈರ್ಯದ ಮಾತುಗಳನ್ನಾಡಿ, ಟ್ರಸ್ಟ್ ವತಿಯಿಂದ 25,000 ರೂ. ಆರ್ಥಿಕ ಸಹಾಯದೊಂದಿಗೆ ಪೇಟ ತೊಡಿಸಿ, ಶಾಲು ಹೊದಿಸಿ ಫಲವಸ್ತು ನೀಡಿ ಗೌರವಿಸಿದರು.
ಫೌಂಡೇಶನಿನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸಿ.ಎ. ಸುದೇಶ್ ಕುಮಾರ್ ರೈ , ಹವ್ಯಾಸಿ ಘಟಕದ ಮಧುಕರ್ ಭಾಗವತ್, ಮಂಗಳೂರು ಘಟಕದ ರವಿ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಮಾಜಿ ಅಧ್ಯಕ್ಷ ಉಲ್ಲಾಸ್ ಶೆಟ್ಟಿ, ಸುರತ್ಕಲ್ ಘಟಕದ ಮಾಧವ ಎಸ್. ಶೆಟ್ಟಿ ಬಾಳ ಕಾಟಿಪಳ್ಳ, ಮುಂಬಯಿ ಉದ್ಯಮಿ ದಯಾನಂದ ಶೆಟ್ಟಿ ಉಪಸ್ಥಿತರಿದ್ದರು.
Kshetra Samachara
18/01/2021 07:28 am