ಮುಲ್ಕಿ: ಮುಲ್ಕಿ ವಿಜಯ ಕಾಲೇಜಿನ ಒಡೆಯರಬೆಟ್ಟು ಶ್ರೀನಿವಾಸ್ ಕಾಮತ್ ಗ್ರಂಥಾಲಯ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಸ್ವಾಮಿ ವಿವೇಕಾನಂದರ 158ನೇ ಜಯಂತಿ ಪ್ರಯುಕ್ತ ವಿವೇಕಾನಂದರ ಜೀವನ ಚರಿತ್ರೆ ಸಾರುವ ಪುಸ್ತಕಗಳ ಪ್ರದರ್ಶನ ಕಾಲೇಜಿನ ಗ್ರಂಥಾಲಯದಲ್ಲಿ ನಡೆಯಿತು.
ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಅದೇನೋ ಪುಳಕವಿದೆ, ಶಕ್ತಿ- ಸೆಳೆತವಿದೆ. ಅವರ ಒಂದೊಂದು ಮಾತು ಬದುಕಿನ ಪ್ರತಿಕ್ಷಣಕ್ಕೂ ಸ್ಫೂರ್ತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ. ನಾರಾಯಣ ಪೂಜಾರಿ ಮಾತನಾಡಿ, ಯುವ ಜನತೆಗೆ ಸ್ಫೂರ್ತಿಯ ಚಿಲುಮೆ ವಿವೇಕಾನಂದರ ಚಿಂತನೆ, ಸಂದೇಶ ಎಂದೆಂದಿಗೂ ಪ್ರಸ್ತುತ ಎಂದರು.
ವಿಜಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಮಿದಾ ಬೇಗಂ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಜಿತೇಂದ್ರ ವಿ. ರಾವ್ ಹೆಜಮಾಡಿ ಉಪಸ್ಥಿತರಿದ್ದರು. ಗ್ರಂಥಪಾಲಕರಾದ ಅರ್ಚನಾ ರಾವ್ ನಿರೂಪಿಸಿದರು. ಶಮಿತಾ ವಂದಿಸಿದರು.
Kshetra Samachara
13/01/2021 10:37 pm