ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಜ. 6, 7ರಂದು ಆಳ್ವಾಸ್ ನಲ್ಲಿ 'ಸಾಹೇಬ್ರು ಬಂದವೇ' ಅರೆಭಾಷೆ ಕನ್ನಡ ನಾಟಕ

ಮೂಡುಬಿದಿರೆ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ರಾಜ್ಯಾದ್ಯಂತ ನಡೆಯುತ್ತಿರುವ ಅರೆಭಾಷೆ ರಂಗ ಪಯಣದ ಪ್ರಸ್ತುತಿಯಲ್ಲಿ ಜೀವನ್ ರಾಂ ಸುಳ್ಯ ನಿರ್ದೇಶನದ 'ಸಾಹೇಬ್ರು ಬಂದವೇ' ಅರೆಭಾಷೆ ಕನ್ನಡ ನಾಟಕ ಜ. 6 ಹಾಗೂ 7ರಂದು ಸಂಜೆ 6.30ರಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ.

ಆಸಕ್ತರಿಗೆ ಉಚಿತ ಪ್ರವೇಶವಿದ್ದು, ಮಾಸ್ಕ್ ಧರಿಸಿ ನಾಟಕ ವೀಕ್ಷಿಸುವಂತೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

05/01/2021 01:27 pm

Cinque Terre

5.81 K

Cinque Terre

0

ಸಂಬಂಧಿತ ಸುದ್ದಿ