ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಅಂಗರಗುಡ್ಡೆ ಶ್ರೀ ರಾಮಾಂಜನೇಯ ಯಕ್ಷ ನಾಟ್ಯಾಲಯ ವಾರ್ಷಿಕೋತ್ಸವ, ಸನ್ಮಾನ

ಮುಲ್ಕಿ: ಎಳವೆಯಲ್ಲಿ ಯಕ್ಷಗಾನದ ಮೂಲಕ ಮಕ್ಕಳಿಗೆ ಸಂಸ್ಕೃತಿ ಹಾಗೂ ಪರಂಪರೆಯ ಸದಭಿರುಚಿ ಮೂಡಿಸುವ ಕಾರ್ಯ ಶ್ಲಾಘನೀಯ ಎಂದು ಉದ್ಯಮಿ, ಯಕ್ಷಗಾನ ಅರ್ಥಧಾರಿ ಚಂದ್ರಶೇಖರ ಆಚಾರ್ಯ ಕೊಡಿಪಾಡಿ ಹೇಳಿದರು.

ಅವರು ಮುಲ್ಕಿ ಸಮೀಪದ ಅಂಗರಗುಡ್ಡೆ ಶ್ರೀ ರಾಮ ಭಜನಾ ಮಂದಿರದ ವಠಾರದಲ್ಲಿ ಶ್ರೀ ರಾಮಾಂಜನೇಯ ಯಕ್ಷ ನಾಟ್ಯಾಲಯದ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಾಧಕರನ್ನು ಗೌರವಿಸಿ ಮಾತನಾಡಿದರು.

ಈ ಸಂದರ್ಭ ಹಿರಿಯ ಯಕ್ಷ ಗುರು ಜಗನ್ನಾಥ ಆಚಾರ್ಯ , ಗ್ರಾಪಂ ಸದಸ್ಯರಾಗಿ ಆಯ್ಕೆಯಾದ ಕೃಷ್ಣ ಶೆಟ್ಟಿಗಾರ್ ಅಂಗರಗುಡ್ಡೆ , ವಿಕಾಸ್ ಶೆಟ್ಟಿ , ವೇದಾವತಿ ಜಯ ಕುಮಾರ್‌ ಅವರನ್ನು ಸನ್ಮಾನಿಸಲಾಯಿತು.

ತುಮಕೂರು ಉದ್ಯಮಿ ಶಂಕರ ಶೆಟ್ಟಿ ಕುಬೆವೂರು, ಉದ್ಯಮಿ ಅರುಣ್ ಸನಿಲ್ ಸುರತ್ಕಲ್, ಉದ್ಯಮಿ ನಿತಿನ್ ಶೆಟ್ಟಿ ಕುಬೆವೂರು, ಉದ್ಯಮಿ ಗೋಪಾಲಕೃಷ್ಣ ಪುನರೂರು, ಮಹಾಲಕ್ಷ್ಮೀ ಸಂಸ್ಥೆಯ ಉಮೇಶ್ ಆಚಾರ್ಯ, ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ಹರಿಕೃಷ್ಣ ದಾಸ್ ಕೆಂಚನಕೆರೆ ಮತ್ತಿತರರು ಉಪಸ್ಥಿತರಿದ್ದರು.

ಪ್ರವೀಣ್ ಶೆಟ್ಟಿ ನಿರೂಪಿಸಿದರು. ಸಾಂಸ್ಕತಿಕ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ "ಶ್ರೀದೇವಿ ಭ್ರಮರಾಂಬಿಕೆ" ಯಕ್ಷಗಾನ ಬಯಲಾಟ ನಡೆಯಿತು.

Edited By : Nirmala Aralikatti
Kshetra Samachara

Kshetra Samachara

04/01/2021 10:14 am

Cinque Terre

7.76 K

Cinque Terre

0

ಸಂಬಂಧಿತ ಸುದ್ದಿ