ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಹಿಂಪ, ಬಜರಂಗದಳ ಕಾರ್ಯಕರ್ತರ ಅಭ್ಯಾಸ ವರ್ಗ

ಬಂಟ್ವಾಳ: ವಿಶ್ವ ಹಿಂದು ಪರಿಷತ್ ಬಜರಂಗದಳ ಬಂಟ್ಚಾಳ ಪ್ರಖಂಡದ ಕಾರ್ಯಕರ್ತರ ಅಭ್ಯಾಸ ವರ್ಗ ಬಿಸಿರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.

ವಿಶ್ವ ಹಿಂದು ಪರಿಷತ್ ಪ್ರಾಂತದ ಸಹಕಾರ್ಯದರ್ಶಿ ಕೃಷ್ಣ ಮೂರ್ತಿ ಉದ್ಘಾಟಿಸಿದರು. ಸಂಘಟನೆಯ ಉದ್ದೇಶಗಳನ್ನು ಪ್ರಾಂತ ಸಂಚಾಲಕ ಸುನಿಲ್ ಕೆ.ಆರ್, ಬಜರಂಗದಳದ ಮಂಗಳೂರು ವಿಭಾಗ ಸಂಚಾಲಕ ಭುಜಂಗ ಕುಲಾಲ್, ವಿಶ್ವಹಿಂದೂ ಪರಿಷತ್ ಧರ್ಮ ಪ್ರಸಾರಣ ಪ್ರಮುಖ್ ರಾಜರಾಮ್ ನಾಯಕ್ ವಿವರಿಸಿದರು.

ಸಮಾರೋಪ ಭಾಷಣದಲ್ಲಿ ವಕೀಲ ಪ್ರಸಾದ್ ಕುಮಾರ್ ಮಾತನಾಡಿ, ಸಮಾಜದಲ್ಲಿ ಸಂಘಟನೆಯ ಕಾರ್ಯಕ್ರಮ ಗಳು ಅಥವಾ ಜವಾಬ್ದಾರಿ ಗಳು ಸಾಮಾಜಿಕ ಜಾಲತಾಣಕ್ಕೆ ಮೀಸಲಾಗದೆ ಸಮಾಜದ ರಕ್ಷಣೆಯ, ಭದ್ರತೆಯ ಜವಾಬ್ದಾರಿ ಯನ್ನು ಹೆಗಲ ಮೇಲೆ ಹಾಕಿಕೊಳ್ಳಬೇಕಾಗಿದೆ.

ಜೀವನದ ಶೈಲಿಯಲ್ಲಿ ಯೂ ಟರ್ನ್ ಆಗಬೇಕಾಗಿದೆ, ಸಂಘಟನೆಗೋಸ್ಕರ ಜೀವನದಲ್ಲಿ ವ್ಯತ್ಯಾಸವಾಗಬೇಕಾಗಿದೆ ಎಂದರು. ಸುಭಾಶ್ಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು.

ವಿಶ್ವಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಪದ್ಮನಾಭ ಬಂಟ್ವಾಳ, ವಿಶ್ಚ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಪ್ರಸನ್ನ, ಜಿಲ್ಲಾ ಕಾರ್ಯದರ್ಶಿ ಸತೀಶ್, ಬಜರಂಗದಳ ಪುತ್ತೂರು ಜಿಲ್ಲಾ ಸಹಸಂಚಾಲಕ ಭರತ್ ಕುಮ್ಡೇಲು, ಗುರುರಾಜ್ ಬಂಟ್ವಾಳ, ಬಜರಂಗದಳ ಬಂಟ್ವಾಳ ಪ್ರಖಂಡದ ಸಂಚಾಲಕ ಶಿವಪ್ರಸಾದ್ ತುಂಬೆ, ಗೋರಕ್ಷ ಪ್ರಮುಖ್ ಅಭಿನ್ ರೈ, ಪ್ರಖಂಡದ ಸಹಸಂಚಾಲಕ ಸಂತೋಷ್ ಕುಲಾಲ್, ದೀಪಕ್ ಬಂಟ್ವಾಳ, ಸೇವಾ ಪ್ರಮುಖ್ ಪ್ರಸಾದ್ ಬೆಂಜನಪದವು, ವಿನಿತ್ ತುಂಬೆ, ಮೋಹನ್ ದಾಸ್ ಪಂಜಿಕಲ್ಲು, ರೋಹಿತ್ ಪೊಡಿಕಲ ಉಪಸ್ಥಿತರಿದ್ದರು.

ವಿಶ್ವಹಿಂದೂ ಪರಿಷತ್ ತಾಲೂಕು ಕಾರ್ಯದರ್ಶಿ ಸುರೇಶ್ ಬೆಂಜನಪದವು ವರ್ಷದ ಕಾರ್ಯಚಟುವಟಿಕೆಗಳ ವರದಿ ನೀಡಿದರು. ಜಿಲ್ಲಾ ಗೋರಕ್ಷ ಪ್ರಮುಖ್ ಆಶೋಕ್ ಶೆಟ್ಟಿ ಸ್ವಾಗತಿಸಿದರು.

Edited By :
Kshetra Samachara

Kshetra Samachara

05/10/2020 04:16 pm

Cinque Terre

2.73 K

Cinque Terre

0

ಸಂಬಂಧಿತ ಸುದ್ದಿ