ಉಡುಪಿ: ಕಾರ್ಕಳ ಉತ್ಸವ-2022 ಅಂಗವಾಗಿ ಅಪೂತಪೂರ್ವ ಉತ್ಸವ ಮೆರವಣಿಗೆಯಲ್ಲಿ ಪ್ರಧಾನ ಮಂತ್ರಿ ಮೋದಿ ವೇಷಾಧಾರಿಯು ನೆರೆದಿರುವವರನ್ನು ನಿಬ್ಬೆರಗಾಗುವಂತೆ ಮಾಡಿತು.
ಕಾರ್ಕಳ ಬಂಡೀಮಠ ದಿಂದ ಪೇಟೆ ಮಾರ್ಗವಾಗಿ ಅನಂತಶಯನದ ಮೂಲಕ ಸ್ವರಾಜ್ಯ ಮೈದಾನಕ್ಕೆ ಮೆರವಣಿಗೆಯು ಸಾಗಿತು. ಆ ಮೂಲಕ ಕೊನೆಯ ಮೂರು ದಿನಗಳ ಕಾರ್ಕಳ ಉತ್ಸವಕ್ಕೆ ಅದ್ಧೂರಿ ಚಾಲನೆ ದೊರಕಿತು. ನರೇಂದ್ರ ಮೋದಿಯ ಮುಖವನ್ನು ಹೋಲುವ ವೇಷಧಾರಿಯು ರಸ್ತೆಯ ನಡುಭಾಗದಲ್ಲಿ ನಡೆದಾಡುತ್ತಿದ್ದರೆ ನೆರೆದಿರುವವರು ಜೈಕಾರ ಹಾಕುತ್ತಿದ್ದರು.
ಈ ಸಂದರ್ಭದಲ್ಲಿ ಪ್ರತಿ ತಂಡಗಳಲ್ಲಿ 75 ಕಲಾವಿದರು ಭಾಗವಹಿಸಿದ್ದು, ಎನ್‌ಸಿಸಿ, ಭೂಸೇನೆ, ವಾಯುಸೇನೆ ಮತ್ತು ನೌಕದಳದ ಒಟ್ಟು 500 ವಿದ್ಯಾರ್ಥಿಗಳು, ಸೌಟ್ಸ್ ಗೈಡ್‌ಸ್‌ಗಳ 300, ವಿವಿಧ ಶಾಲೆಗಳ ಬ್ಯಾಂಡ್ ಸೆಟ್ 250, ರೋವರ್ಸ್ ಹಾಗು ರೇಂಜಸ್‌ರ್ಗಳ 300 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ಹತ್ತು ಸಾವಿರ ಕಲಾವಿದರು ಭಾಗವಹಿಸಿದ್ದಾರು. ರಸ್ತೆಯ ಎರಡೂ ಬದಿಗಳಲ್ಲಿ ಉತ್ಸವ ಮೆರವಣಿಗೆ ವೀಕ್ಷಿಸಲು ಅಸಂಖ್ಯಾತ ಜನರು ಪಾಲ್ಗೊಂಡರು.
Kshetra Samachara
19/03/2022 08:07 am