ಮಂಗಳೂರು: ನಗರದ ಮಣ್ಣಗುಡ್ಡೆಯಲ್ಲಿನ ಗಾಂಧಿನಗರ ಅಂಚೆ ಕಚೇರಿಯಲ್ಲಿ ಕಳೆದ ವರ್ಷ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅನಾಹುತ ಸಂಭವಿಸಿತ್ತು. ತಕ್ಷಣ ಈ ವಿಚಾರದ ಬಗ್ಗೆ ನೆರೆಹೊರೆಯವರಿಗೆ ಮಾಹಿತಿ ನೀಡಿ ಸಂಭಾವ್ಯ ಅನಾಹುತವನ್ನು ತಪ್ಪಿಸಿರುವ ಇಬ್ಬರು ಮಕ್ಕಳಿಗೆ ಬಲ್ಮಠದ ಹಿರಿಯ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಸನ್ಮಾನ ಮಾಡಿ ಅಭಿನಂದಿಸಲಾಯಿತು.
ಪಣಂಬೂರಿನ ಕೇಂದ್ರೀಯ ವಿದ್ಯಾಲಯದ 5ನೇ ತರಗತಿ ವಿದ್ಯಾರ್ಥಿ ಸೃಜನ್ ಮತ್ತು 6ನೇ ತರಗತಿ ವಿದ್ಯಾರ್ಥಿನಿ ಶರಣ್ಯಾ ಸಮಯಪ್ರಜ್ಞೆ ಮೆರೆದ ಚಿಣ್ಣರು.
2020ರ ಫೆಬ್ರವರಿ 23ರಂದು ಗಾಂಧಿನಗರ ಅಂಚೆ ಕಚೇರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿತ್ತು. ಈ ಸಂದರ್ಭ ಅಲ್ಲೇ ಇದ್ದ ಸೃಜನ್ ಮತ್ತು ಶರಣ್ಯಾ ಎಂಬ ಮಕ್ಕಳು ತಕ್ಷಣ ಈ ವಿಚಾರವನ್ನು ನೆರೆ ಹೊರೆಯವರಿಗೆ ತಿಳಿಸಿ ನಡೆಯಲಿದ್ದ ಹೆಚ್ಚಿನ ಅನಾಹುತ ತಪ್ಪಿಸಿದ್ದರು.
ಈ ಇಬ್ಬರು ಮಕ್ಕಳ ಸಮಯಪ್ರಜ್ಞೆಯನ್ನು ಗುರುತಿಸಿದ ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಅವರು ಇಬ್ಬರೂ ಮಕ್ಕಳಿಗೂ ಪ್ರಶಂಸಾ ಪತ್ರ ಹಾಗೂ ಮೈ ಸ್ಟಾಂಪ್ (ಮಕ್ಕಳ ಭಾವಚಿತ್ರ ಹೊಂದಿರುವ ಸ್ಟಾಂಪ್) ನೀಡಿ ಸನ್ಮಾನಿಸಿದರು.
Kshetra Samachara
27/01/2021 08:47 pm