ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಮುದ್ದು ಗುಮ್ಮ, ಕಲ್ಲಚ್ಚು ಕವನಗಳು ಕೃತಿ ಅನಾವರಣ

ಮೂಡುಬಿದಿರೆ: ವಿಂಶತಿ ಸಂಭ್ರಮದಲ್ಲಿರುವ ಮಂಗಳೂರಿನ ಕಲ್ಲಚ್ಚು ಪ್ರಕಾಶನ ಮತ್ತು ಮೂಡುಬಿದಿರೆ ಪ್ರೆಸ್‌ಕ್ಲಬ್ ಆಶ್ರಯದಲ್ಲಿ ಉಪನ್ಯಾಸಕ, ಕಲಾವಿದ ದೀವಿತ್ ಎಸ್.ಕೆ. ಪೆರಾಡಿ ಅವರು ಮಕ್ಕಳಿಗಾಗಿ ಬರೆದಿರುವ 'ಮುದ್ದು ಗುಮ್ಮ' ಒಲವಿನ ಗೀತೆಗಳ ಕೃತಿ ಮತ್ತು ಬರಹಗಾರ ಮಹೇಶ್ ಆರ್. ನಾಯಕ್ ಅವರ `ಕಲ್ಲಚ್ಚು ಕವನಗಳು' ಕೃತಿಯನ್ನು ಮೂಡುಬಿದಿರೆ ಸಮಾಜ ಮಂದಿರದ ಮಿನಿಹಾಲ್‍ನಲ್ಲಿ ಬಿಡುಗಡೆಗೊಳಿಸಲಾಯಿತು.

ಹಿರಿಯ ಸಾಹಿತಿ ಡಾ.ನಾ. ಮೊಗಸಾಲೆ ಅಧ್ಯಕ್ಷತೆ ವಹಿಸಿ, ಮುದ್ದು ಗುಮ್ಮ ಕೃತಿಯನ್ನು ಬಿಡುಗಡೆಗೊಳಿಸಿದರು. ಮಕ್ಕಳ ಬಗ್ಗೆ ಅಧ್ಯಯನ ನಡೆಸಿ ಅಂತ್ಯ ಪ್ರಾಸ, ರಿದಂನೊಂದಿಗೆ ಹಾಸ್ಯ-ರಾಗಬದ್ಧ ಮತ್ತು ನಾಟಕೀಯತೆಯನ್ನು ಅಳವಡಿಸಿಕೊಂಡು ಕವಿತೆ ಬರೆದಾಗ ಮಕ್ಕಳ ಮನಸ್ಸನ್ನು ತಲುಪಲು ಸಾಧ್ಯ ಎಂದರು.

ಯುವ ಸಂಶೋಧಕ, ಉಪನ್ಯಾಸಕ ಅರುಣ್ ಉಳ್ಳಾಲ್ `ಮುದ್ದು ಗುಮ್ಮ' ಕೃತಿ ಪರಿಚಯಿಸಿದರು. ಸಾಹಿತಿ, ಉಪನ್ಯಾಸಕ ರಘು ಇಡ್ಕಿದು `ಕಲ್ಲಚ್ಚು ಕವನಗಳು' ಕೃತಿ ಬಿಡುಗಡೆಗೊಳಿಸಿ, ಪರಿಚಯಿಸಿದರು. ಮೂಡುಬಿದಿರೆ ಪ್ರೆಸ್‍ಕ್ಲಬ್ ಅಧ್ಯಕ್ಷ ವೇಣುಗೋಪಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಂಗೀತ ಶಿಕ್ಷಕಿ ಸ್ವಪ್ನಶ್ರೀ ಪುತ್ರಾಯ `ಮುದ್ದು ಗುಮ್ಮ'ದ ಆಯ್ದ ಗೀತೆ ಹಾಡಿದರು. ಕಲ್ಲಚ್ಚು ಪ್ರಕಾಶನದ ಪರವಾಗಿ ದೀವಿತ್ ಎಸ್.ಕೆ.ಪೆರಾಡಿ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತ ಧನಂಜಯ ಮೂಡುಬಿದಿರೆ ನಿರೂಪಿಸಿದರು.

Edited By : Vijay Kumar
Kshetra Samachara

Kshetra Samachara

21/12/2020 06:27 pm

Cinque Terre

2.52 K

Cinque Terre

0

ಸಂಬಂಧಿತ ಸುದ್ದಿ