ಮುಲ್ಕಿ: ಕಟೀಲು ನಂದಿನಿ ಬ್ರಾಹ್ಮಣ ಸಭಾದ ವಾರ್ಷಿಕ ಮಹಾಸಭೆ ಮತ್ತು ವಾರ್ಷಿಕೋತ್ಸವ ಭಾನುವಾರ ಕಟೀಲು ಸಾನಿಧ್ಯ ಸಭಾಭವನದಲ್ಲಿ ನಡೆಯಿತು.
ಮಹಾಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಡಾ.ಎಸ್. ಪದ್ಮನಾಭ ಭಟ್ ಎಕ್ಕಾರು, ಉಪಾಧ್ಯಕ್ಷರಾಗಿ ವೇದವ್ಯಾಸ ಉಡುಪ, ಸುಬ್ರಹ್ಮಣ್ಯ ಕೊರಿಯಾರ್, ಕಾರ್ಯದರ್ಶಿಗಳಾಗಿ ಅನಂತ ಆಚಾರ್ಯ ಶಿಬರೂರು, ಜ್ಯೋತಿ ಉಡುಪ, ಕೋಶಾಧಿಕಾರಿಯಾಗಿ ಸ್ಪರೂಪ್ ಆರ್. ಭಟ್, ಜತೆ ಕೋಶಾಧಿಕಾರಿಯಾಗಿ ವೆಂಕಟೇಶ ಉಡುಪ ಅಧಿಕಾರ ಸ್ವೀಕರಿಸಿದರು.
ಬಳಿಕ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕಟೀಲು ದೇವಳದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿದರು. ಮುಖ್ಯ ಅಭ್ಯಾಗತರಾಗಿ ಅಖಿಲ ಕರ್ನಾಟಕ ಅರ್ಚಕರು ಮತ್ತು ಪುರೋಹಿತ ಪರಿಷತ್ ನ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ವೇ.ಮೂ. ಪಿ. ಕೃಷ್ಣರಾಜ ಭಟ್ ಮಾತನಾಡಿ, ಸರಕಾರದಿಂದ ಬ್ರಾಹ್ಮಣರಿಗೆ ನೀಡುವ ಸವಲತ್ತು ಹಾಗೂ ಬ್ರಾಹ್ಮಣರು ಸಂಘಟಿತರಾಗಬೇಕಾದ ಅವಶ್ಯಕತೆ ಕುರಿತು ಹೇಳಿದರು.
ಅಧ್ಯಕ್ಷತೆಯನ್ನು ಡಾ.ಎಸ್ ಪದ್ಮನಾಭ ಭಟ್ ವಹಿಸಿದ್ದರು. ಹಿರಿಯ ದಂಪತಿಗಳಿಗೆ ಸನ್ಮಾನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಅನಂತ ಆಚಾರ್ಯ ಸ್ವಾಗತಿಸಿದರು. ಗುರುಪ್ರಸಾದ್ ಭಟ್ ವಂದಿಸಿದರು. ಬಳಿಕ ಸಂಘದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Kshetra Samachara
13/12/2020 10:59 pm