ಬಂಟ್ವಾಳ: ಕರ್ನಾಟಕ ಪ್ರೌಢಶಾಲೆ ಮಾಣಿಯಲ್ಲಿ ಸುಮಾರು 34 ವರ್ಷಗಳಿಂದ ಜವಾನರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಿ.ಕೃಷ್ಣಪ್ಪ ನಾಯ್ಕ್ ಅವರ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಮಾತನಾಡಿದ ಮಾಣಿ ವಿದ್ಯಾಭಿವರ್ಧಕ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ, ಕೃಷ್ಣಪ್ಪ ನಾಯ್ಕ ಅವರ ಸೇವೆಯನ್ನು ಶ್ಲಾಘಿಸಿದರು. ಮುಖ್ಯ ಅತಿಥಿಯಾಗಿ ತುಂಬೆ ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಗಂಗಾಧರ ಆಳ್ವ ಶುಭ ಹಾರೈಸಿದರು. ಆಡಳಿತ ಮಂಡಳಿ ಉಪಾಧ್ಯಕ್ಷ ಮಹಮ್ಮದ್ ಹಬೀಬ್ ಮಾಣಿ, ಶಾಲಾ ಸಂಚಾಲಕ ಇಬ್ರಾಹಿಂ ಕೆ. ಮಾಣಿ, ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಶ್ರೀದೇವಿ, ಆಂಗ್ಲ ಮಾಧ್ಯಮ ಶಾಲೆ ಮುಖ್ಯ ಶಿಕ್ಷಕಿ ಸಾರಿಕಾ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹಮೀದ್ ಕಂದಕ್, ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಕ ಗಂಗಾಧರ ರೈ, ಸಿಬ್ಬಂದಿ ಹಾಜರಿದ್ದರು. ಮುಖ್ಯೋಪಾಧ್ಯಾಯ ಬಿ.ಕೆ.ಭಂಡಾರಿ ಸ್ವಾಗತಿಸಿದರು. ಶಿಕ್ಷಕ ಚೆನ್ನಪ್ಪ ಗೌಡ ವಂದಿಸಿದರು. ಜಯರಾಮ ಕೆ. ಕಾರ್ಯಕ್ರಮ ನಿರೂಪಿಸಿದರು.
Kshetra Samachara
06/12/2020 04:06 pm