ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಲೊರೆಟ್ಟೊ ಅಗ್ರಾರ್ ಲಯನ್ಸ್‌ಗೆ ವಲಯಾಧ್ಯಕ್ಷರ ಭೇಟಿ

ಬಂಟ್ವಾಳ: ಲೊರೆಟ್ಟೊ-ಅಗ್ರಾರ್ ಲಯನ್ಸ್ ಕ್ಲಬ್‌ಗೆ ಪ್ರಾಂತೀಯ ಅಧ್ಯಕ್ಷ ಸಂಜೀವ ಶೆಟ್ಟಿ, ವಲಯಾಧ್ಯಕ್ಷ ಶ್ರೀನಿವಾಸ್ ಪೂಜಾರಿ ಅವರ ಅಧಿಕೃತ ಭೇಟಿ ಹಾಗೂ ವಲಯ ಭ್ರಾತೃತ್ವ ಆಚರಣೆಯು ಲೊರೆಟ್ಟೊ ಮಿನಿ ಸಭಾಭವನದಲ್ಲಿ ನಡೆಯಿತು.

ಪ್ರಾಂತೀಯ ಅಧ್ಯಕ್ಷ ಸಂಜೀವ ಶೆಟ್ಟಿ ಅವರು ಮಾತನಾಡಿ, ಲಯನ್ಸ್ ಪ್ರಾಂತೀಯ ಮಟ್ಟದಲ್ಲಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಶೈತ್ಯಾಗಾರವನ್ನು ನೀಡಲಾಗಿದ್ದು, ಜಾತಿ, ಮತದ ಬೇಧವಿಲ್ಲದೆ ಅದು ಎಲ್ಲರ ಉಪಯೋಗಕ್ಕೆ ಲಭ್ಯವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಲೊರೆಟ್ಟೊ-ಅಗ್ರಾರ್ ಕ್ಲಬ್‌ನಿಂದ ಶೈತ್ಯಾಗಾರಕ್ಕಾಗಿ 25 ಸಾವಿರ ರೂ.ಗಳನ್ನು ದೇಣಿಗೆಯಾಗಿ ನೀಡಲಾಯಿತು. ಜೊತೆಗೆ ಕಿಡ್ನಿ ವೈಫಲ್ಯಕ್ಕೊಳಗಾದವರಿಗೆ ನೆರವು, ವೃದ್ಧಾಶ್ರಮಕ್ಕೆ ಸುಣ್ಣ-ಬಣ್ಣ, ಕನ್ನಡ ಮಾಧ್ಯಮ ಶಾಲೆಗೆ ಟಿವಿ ಕೊಡುಗೆ ಹೀಗೆ ಒಟ್ಟು 38 ಸಾವಿರ ರೂ.ಗಳ ಸೇವಾ ಚಟುವಟಿಕೆಗಳನ್ನು ನೆರವೇರಿಸಲಾಯಿತು.

ಪ್ರಾಂತೀಯ ಸಲಹೆಗಾರ ರಾಧಾಕೃಷ್ಣ ರೈ, ವಲಯ 2ರ ಅಧ್ಯಕ್ಷ ಮನೋರಂಜನ್, ಪ್ರಾಂತ್ಯದ ಎಲ್ಲಾ 8 ಕ್ಲಬ್ಗಳ ಸದಸ್ಯರು, ಪದಾಧಿಕಾರಿಗಳು, ಕ್ಲಬ್ ಸದಸ್ಯರು ಉಪಸ್ಥಿತರಿದ್ದರು. ಕ್ಲಬ್ ಅಧ್ಯಕ್ಷ ಜೋನ್ ಸಿರಿಲ್ ಡಿಸೋಜಾ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಿನೀತ್ ರೊಡ್ರಿಗಸ್ ವರದಿ ಮಂಡಿಸಿದರು. ಚಾರ್ಲ್ ಮಾರ್ಟಿಸ್ ವಂದಿಸಿದರು.

Edited By : Vijay Kumar
Kshetra Samachara

Kshetra Samachara

06/12/2020 03:50 pm

Cinque Terre

1.95 K

Cinque Terre

0

ಸಂಬಂಧಿತ ಸುದ್ದಿ