ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಡಾ.ಬಿ.ಆರ್. ಅಂಬೇಡ್ಕರ್ ಪುಣ್ಯತಿಥಿ; 'ಸಾಮರಸ್ಯ' ದಿನಾಚರಣೆ

ಮಂಗಳೂರು: ಡಾ.ಪಿ.ದಯಾನಂದ ಪೈ- ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ, ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಂಟಿ ಆಶ್ರಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪುಣ್ಯತಿಥಿಯ ಅಂಗವಾಗಿ 'ಸಾಮರಸ್ಯ' ದಿನವನ್ನಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಕೇಶವ ಬಂಗೇರ ಮಾತನಾಡಿ,‌ ಅಂಬೇಡ್ಕರ್ ಅವರ ಆದರ್ಶ, ಜೀವನದಲ್ಲಿನ ಧ್ಯೇಯ, ಗುರಿ ಎಲ್ಲವನ್ನೂ ಇಂದಿನ ಯುವಜನತೆ ಅಳವಡಿಸಿಕೊಳ್ಳಬೇಕಾಗಿದೆ. "ನಾನು ಹುಟ್ಟಿನಿಂದಲೂ ಭಾರತೀಯ, ನನ್ನ ಸಾವು ಕೂಡ ಭಾರತೀಯನಾಗಿಯೇ' ಎಂಬ ಅಂಬೇಡ್ಕರ್ ಅವರ ಮಾತು ಅವರಲ್ಲಿದ್ದ ಭಾರತೀಯತೆ ಮತ್ತು ರಾಷ್ಟ್ರಪ್ರೇಮವನ್ನು ತೋರಿಸುತ್ತದೆ. ಅಂಬೇಡ್ಕರ್ ಅವರು ಬೌದ್ಧಧರ್ಮವನ್ನು ಸ್ವೀಕರಿಸಿದ್ದು, ಆ ಧರ್ಮ ಭಾರತೀಯ ಸಂಸ್ಕೃತಿಯೊಂದಿಗೆ ಹುಟ್ಟಿ ಬೆಳೆದದ್ದು ಅನ್ನೋ ಕಾರಣಕ್ಕೆ ಎಂದರು.

ಮಂಗಳೂರು ವಿಶ್ವ ವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ರವಿಚಂದ್ರ ಪಿ.ಎನ್., ಪ್ರಾಂಶುಪಾಲರಾದ ಪ್ರೊ. ರಾಜಶೇಖರ್ ಹೆಬ್ಬಾರ್, ಉಪಪ್ರಾಂಶುಪಾಲ ಡಾ. ಶಿವರಾಮ್, IQAC ಸಂಯೋಜಕ ಡಾ. ಥೆರೆಸಾ ಪಿರೇರಾ, ಅ.ಭಾ.ವಿ.ಪ. ವಿಭಾಗ ಸಂಘಟನಾ ಕಾರ್ಯದರ್ಶಿ ಬಸವೇಶ್ ಕೋರಿ, ನಗರ ಸಂಘಟನಾ ಕಾರ್ಯದರ್ಶಿ ಅಜಯ್ ಪ್ರಭು, ಮಹಾನಗರ ಕಾರ್ಯದರ್ಶಿ ಮಣಿಕಂಠ ಕಳಸ, ವಿದ್ಯಾರ್ಥಿ ನಾಯಕ ಶ್ರೇಯಸ್, ನಿಶಾನ್ ಆಳ್ವ , ಅಕ್ಷಯ್ ಕಾಮಾಜೆ, ಶ್ರೀಲಕ್ಷ್ಮಿ, ದೀಪ್ತಿ, ಆತ್ಮಿಕಾ, ಸುಶಾನ, ಆದಿತ್ಯ ಶೆಟ್ಟಿ, ಆದಿತ್ಯ ಕೆ.ಆರ್., ನೀಲೇಶ್, ಪರಶುರಾಮ್ ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

06/12/2020 09:58 am

Cinque Terre

2.21 K

Cinque Terre

0

ಸಂಬಂಧಿತ ಸುದ್ದಿ