ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಶ್ರೀ ಕ್ಷೇತ್ರ ಕಟೀಲಿನಲ್ಲಿ ಕಾರ್ತಿಕ ದೀಪೋತ್ಸವ ಸಂಭ್ರಮ

ಮುಲ್ಕಿ: ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ದೀಪೋತ್ಸವ ಸರಳ ರೀತಿಯಲ್ಲಿ ಆಚರಿಸಲಾಯಿತು.

ಕಟೀಲು ಬ್ರಹ್ಮಕಲಶೋತ್ಸವ ದಿನಗಳಲ್ಲಿ ಪ್ರಾರ್ಥನೆ ನಡೆಸಿದಂತೆ ಪ್ರಥಮ ಬಾರಿಗೆ ಕಟೀಲಿನ ಭ್ರಾಮರಿ ವನ ಕುದ್ರುವಿನಲ್ಲಿ ಕಟೀಲು ಆಸುಪಾಸಿನ ಭಕ್ತರು ಬೆಳೆದ ತರಕಾರಿಗಳನ್ನು ತಂದು ತಳಿರು ತೋರಣಗಳಿಂದ ಸಿಂಗರಿಸಿ ದೇವರನ್ನು ಕುಳ್ಳಿರಿಸಿ ವಿಶೇಷ ಪೂಜೆ ನಡೆಯಿತು.

ಇದಕ್ಕೂ ಮೊದಲು ದೇವಳದ ಒಳಗೆ ಶ್ರೀ ದೇವರ ಉತ್ಸವ ಬಲಿ ನಡೆಯಿತು. ಬಳಿಕ ರಥಬೀದಿಯಲ್ಲಿ ಚಂದ್ರಮಂಡಲ ರಥೋತ್ಸವ, ಭಕ್ತಾದಿಗಳಿಂದ ವಿಶಿಷ್ಟ ರೀತಿಯಲ್ಲಿ ದೀಪೋತ್ಸವ ನಡೆಯಿತು.

ಈ ಸಂದರ್ಭ ಅರ್ಚಕ ಹರಿನಾರಾಯಣ ಆಸ್ರಣ್ಣ ಮಾತನಾಡಿ, ಕೊರೊನಾ ಹಿನ್ನಲೆಯಲ್ಲಿ ಈ ಬಾರಿ ಸರಳ ರೀತಿಯ ಕಾರ್ತಿಕ ಮಾಸದ ಬಹುಳ ಪಂಚಮಿಯ ದಿನದಂದು ದೀಪೋತ್ಸವ ನಡೆಯುತ್ತಿದ್ದು, ಪ್ರಥಮ ಬಾರಿಗೆ ದೇವಳದ ಕುದ್ರುವಿನ ಭ್ರಾಮರಿ ವನದಲ್ಲಿ ನಡೆಯುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಪಟಾಕಿ ನಿಷೇಧಿಸಲಾಗಿದ್ದು, ಸರಳ ರೀತಿಯಲ್ಲಿ ದೀಪೋತ್ಸವ ಆಚರಿಸಲಾಗಿದೆ ಎಂದರು.

ತಂತ್ರಿಗಳಾದ ವೇದವ್ಯಾಸ ತಂತ್ರಿ, ಕಟೀಲು ಕ್ಷೇತ್ರದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ವೆಂಕಟ್ರಮಣ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಮತ್ತಿತರರು ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

06/12/2020 09:02 am

Cinque Terre

4.18 K

Cinque Terre

0

ಸಂಬಂಧಿತ ಸುದ್ದಿ