ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶದ ಅಂಗವಾಗಿ ದೃಢಕಲಶ ಆಗಬೇಕಿರುವುದರಿಂದ ಡಿಸೆಂಬರ್ 28ರಿಂದ ಫೆ.17ರ ವರೆಗೆ ಸಾರ್ವಜನಿಕ ಶ್ರೀ ದೇವರ ದರ್ಶನ ಇರುವುದಿಲ್ಲ.
ಕೋವಿಡ್ ನಿಂದಾಗಿ ಬ್ರಹ್ಮಕಲಶೋತ್ಸವ ನಡೆದ ಬಳಿಕ ಜೀರ್ಣೋದ್ಧಾರದ ಉಳಿದ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ದೃಢಕಲಶ ಬಾಕಿ ಇತ್ತು.
ಪ್ರಸ್ತುತ ಸಾನಿಧ್ಯದಲ್ಲಿ ಸಣ್ಣಪುಟ್ಟ ಜೀರ್ಣೋದ್ಧಾರದ ಕೆಲಸ ನಡೆಸಿ, ದೃಢಕಲಶ ಮಾಡಬೇಕಾಗಿದೆ. ಹೀಗಾಗಿ ದೇವರ ದರ್ಶನ ಈ ಸಮಯದಲ್ಲಿ ಇರುವುದಿಲ್ಲ.
ಈ ಅವಧಿಯಲ್ಲಿ ದೇವಸ್ಥಾನಕ್ಕೆ ಸಂಬಂಧಪಟ್ಟ ಸೀಮೆಯ ಒಳಗೆ ವಿಶೇಷ ಕಾರ್ಯಕ್ರಮ ಮಾಡುವುದಾದರೆ, ದೇವರಲ್ಲಿ ಪ್ರಾರ್ಥಿಸಿ ಮುಂದುವರಿಯಬಹುದು ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.
Kshetra Samachara
04/12/2020 07:17 pm