ಮುಲ್ಕಿ: ಮುಲ್ಕಿ ಸಮೀಪದ ಮಾನಂಪಾಡಿ ಶ್ರೀ ಧೂಮಾವತಿ- ಜಾರಂದಾಯ ದೈವಸ್ಥಾನ ಕ್ಷೇತ್ರದಲ್ಲಿ ಶ್ರೀ ಗುಡ್ಡೆ ಧೂಮಾವತಿ- ಜಾರಂದಾಯ ಪರಿವಾರ ಶಕ್ತಿಗಳಿಗೆ ನವಕ ಕಲಶಾಭಿಷೇಕ ನಡೆಯಿತು. ಬಳಿಕ ಮಿತ್ರವೃಂದದ ವತಿಯಿಂದ ಮಾನಂಪಾಡಿ ಶ್ರೀ ರಾಘವೇಂದ್ರ ಭಟ್ ನೇತೃತ್ವದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭ ಮುಲ್ಕಿ ನಗರ ಪಂಚಾಯತ್ ನೂತನ ಅಧ್ಯಕ್ಷ ಸುಭಾಷ್ ಶೆಟ್ಟಿ ಹಾಗೂ ಉಪಾಧ್ಯಕ್ಷ ಸತೀಶ್ ಅಂಚನ್ ಅವರನ್ನು ಕ್ಷೇತ್ರದ ವತಿಯಿಂದ ಗೌರವಿಸಿ, ಅಭಿನಂದಿಸಲಾಯಿತು.
Kshetra Samachara
29/11/2020 04:49 pm