ಮಂಗಳೂರು: 35 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಜಿಲ್ಲಾ ರಂಗಮಂದಿರ ಯೋಜನೆಗೆ ಮತ್ತೆ ಚಾಲನೆ ನೀಡಿ ಶೀಘ್ರ ಕಾರ್ಯರೂಪಕ್ಕೆ ತರಲು ಜಿಲ್ಲಾ ರಂಗಮಂದಿರ ಹೋರಾಟ ಸಮಿತಿಯ ಗೌರವಾಧ್ಯಕ್ಷ ರಾಮಚಂದ್ರ ಬೈಕಂಪಾಡಿ ನೇತೃತ್ವದಲ್ಲಿ ತುರ್ತು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಮಿತಿ ಅಧ್ಯಕ್ಷ ನ್ಯಾಯವಾದಿ ಶಶಿರಾಜ್ ಕಾವೂರು ಮಾತನಾಡಿ, ಈಗಾಗಲೇ ಕರಾವಳಿ ಉತ್ಸವದ ಮೂಲಕ ಸಂಗ್ರಹ ವಾದ 4.5 ಕೋಟಿ ರೂ. ಹಾಗೂ ಸರ್ಕಾರದ ಅನುದಾನ 7 ಕೋಟಿ ರೂ. ಮಂಜೂರು ಮಾಡಿದೆ. ಆದ್ದರಿಂದ ಕಾಮಗಾರಿ ಶೀಘ್ರ ಆರಂಭಿಸುವಂತೆ ಒತ್ತಾಯಿಸಿದರು.
ಜಿಲ್ಲಾ ರಂಗಮಂದಿರ ಹೆಸರಲ್ಲಿ ವಿವಿಧ ಖಾತೆಗಳಲ್ಲಿ ನಿಧಿ ಸಂಚಯವಾಗಿದ್ದು, ಇತ್ತೀಚೆಗೆ ಸರಕಾರದಿಂದ ರಂಗಮಂದಿರ ಕಟ್ಟುವ ಬಗ್ಗೆ ಸುಮಾರು ಏಳು ಕೋಟಿ ಅನುದಾನ ಮಂಜೂರಾಗಿದ್ದು, ಇನ್ನೂ ಕಾಮಗಾರಿ ಆರಂಭವಾಗಿಲ್ಲದ ಕಾರಣ ಆದಷ್ಟು ಶೀಘ್ರ ಕೆಲಸ ಆರಂಭಿಸಬೇಕೆಂದು ಸರಕಾರವನ್ನು ಒತ್ತಾಯಿಸುವ ಬಗ್ಗೆ ಪ್ರಸ್ತಾಪಿಸಿದರು.
ಸದ್ಯ ಲಭ್ಯವಿರುವ ಹಣದಲ್ಲಿ ನಿರ್ಮಾಣಗೊಳ್ಳಬಹುದಾದ ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಮತ್ತು ಜನಪ್ರತಿನಿಧಿಗಳ ಗಮನ ಸೆಳೆಯುವ ಬಗ್ಗೆ ತೀರ್ಮಾನಿಸಲಾಯಿತು.
ಸಮಿತಿ ಕಾರ್ಯದರ್ಶಿ ಜಗನ್ ಪವಾರ್ ಬೇಕಲ್, ಹಿರಿಯ ಕಲಾವಿದರಾದ ಗೋಪಾಡ್ಕರ್, ಗಣೇಶ್ ಸೋಮಯಾಜಿ, ಪ್ರಕಾಶ್ ಶೆಣೈ, ಕೆ.ಕೆ.ಪೇಜಾವರ, ಮಂಜುಳಾ ಶೆಟ್ಟಿ, ರಾಜೇಶ್ ಸ್ಕೈಲಾರ್ಕ್, ಮೈಮ್ ರಾಮದಾಸ್, ರಾಕೇಶ್ ಹೊಸಬೆಟ್ಟು, ವಿನೋದ್, ರಾಜೇಶ್, ದಯಾನಂದ ಹಿರೇಮಠ, ಸುಮಂತ್ ಶೆಟ್ಟಿ, ಅವಿನಾಶ್ ಎಸ್. ಮತ್ತಿತರರು ಉಪಸ್ಥಿತರಿದ್ದರು.
Kshetra Samachara
29/11/2020 11:44 am