ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಳೇಪುಣಿ: ನೂರುಲ್ ಇಸ್ಲಾಂ ಮದರಸದ ನೂತನ ಕಟ್ಟಡ ಉದ್ಘಾಟನೆ

ಬಂಟ್ವಾಳ: ಪ್ರಸಕ್ತ ಸನ್ನಿವೇಶದಲ್ಲಿ ವಿದ್ಯಾರ್ಥಿಗಳ ಪೋಷಕರ ಗುರುಗಳ ಮಧ್ಯೆ ಹಿಂದಿನಂತೆ ಭಾವನಾತ್ಮಕ ಸಂಭಂದ ಹಳಸಿರುವುದು ದುರಂತ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಅಸಯ್ಯದ್ ಫಝಲ್ ಕೋಯಮ್ಮ ತಂಗಳ್ ಹೇಳಿದರು.

ಬದ್ರಿಯ ಜುಮ್ಮಾ ಮಸೀದಿ ಇರಾ ಬಾಳೆಪುಣಿ ಅಧೀನದಲ್ಲಿ ನಿರ್ಮಾಣಗೊಂಡ ನೂರುಲ್ ಇಸ್ಲಾಮ್ ಮದರಸದ ನೂತನ ಕಟ್ಟಡ ಉದ್ಘಾಟಿಸಿ ಸಂದೇಶ ನೀಡಿದರು.

ಹಿರಿಯ ಧಾರ್ಮಿಕ ನಾಯಕರೂ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಖಮರುಲ್ ಉಲಮಾ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ಕಾರ್ಯಕ್ರಮಕ್ಕೆ ಶುಭಾಶಂಸನೆಗೈದರು.

ಸಭಾ ಕಾರ್ಯಕ್ರಮವನ್ನು ರಾಜ್ಯ ವಕ್ಫ್ ಬೋರ್ಡ್ ನಿರ್ದೇಶಕರಾದ ಅಲ್ಹಾಜ್ ಮೌಲಾನಾ ಶಾಫಿ ಸಹದಿ ಉದ್ಘಾಟಿಸಿದರು.

ಮಸೀದಿಯ ಧರ್ಮ ಗುರುಗಳಾದ ಅಲ್ಹಾಜ್ ಮುಹಮ್ಮದ್ ಅಲಿ ಫೈಝಿ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ ಮತ್ತು ಇರಾ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ರಝಾಕ್ ಕುಕ್ಕಾಜೆ ಶುಭ ಹಾರೈಸಿದರು.

ಮಸೀದಿಯ ಅಧ್ಯಕ್ಷರಾದ ಎಂ ಬಿ ಸಖಾಫಿ ಸ್ವಾಗತಿಸಿ ಪ್ರಸ್ಥಾಪನೆಗೈದರು. ಮುಸ್ತಫಾ ಸಹದಿ ಮುಸ್ಲಿಯಾರ್ ಧನ್ಯವಾದ ಸಲ್ಲಿಸಿ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚೆಗೆ ನಿಧನರಾದ ಊರಿನ ಹಿರಿಯ ಗಣ್ಯರಾದ ಮರ್ಹೂಂ ಕುಜ್ಹಿ ಹಾಜಿಯವರ ಸ್ಮರಣಾರ್ಥ ಅನ್ನದಾನ ವಿತರಿಸಲಾಯಿತು.

Edited By : Nirmala Aralikatti
Kshetra Samachara

Kshetra Samachara

23/11/2020 07:31 pm

Cinque Terre

2.55 K

Cinque Terre

0

ಸಂಬಂಧಿತ ಸುದ್ದಿ