ಮೂಡುಬಿದಿರೆ: ಭೂ ಸುದಾರಣಾ ಕಾಯ್ದೆಯಿಂದ ಜೈನರು ಅತೀ ಹೆಚ್ಚು ಭೂಮಿ ಕಳೆದುಕೊಂಡಿದ್ದಾರೆ. ಈಗಾಗಿ ಇಂದಿಗೂ ಬಹುಪಾಲು ಜೈನರು ಬಿಜೆಪಿ ಮತದಾರರಾಗಿದ್ದಾರೆ. ಬಹಳ ವರ್ಷಗಳಿಂದ ನಿಗಮದ ನಿರೀಕ್ಷೆ ಇದ್ದರೂ ಅಹಿಂಸಾ ವಾದಿಗಳಾಗಿರುವುದರಿಂದ ಎಲ್ಲವನ್ನೂ ಸಹಿಸಿ ಕೂರಿದ್ದೇವೆ. ಈಗಾಗಿ ಜೈನ ಸಮುದಾಯಕ್ಕೂ ಅಭಿವೃದ್ದಿ ನಿಗಮ ನೀಡಬೇಕೆಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಜೈನರ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಇತಿಹಾಸದಲ್ಲಿ ಜೈನ ಅರಸರಿ ಆಳ್ವಿಕೆ ನಡೆಸಿದ್ದು, ಸದ್ಯ ಬಹುತೇಕ ದೇವಾಲಯಗಳು ಜೈನರ ಆಡಳಿತದಲ್ಲಿದೆ. ಇತಿಹಾಸ ಉಳಿಯಲು ಮತ್ತು ಸಮುದಾಯದ ಅಭಿವೃದ್ದಿಗಾಗಿ ಮುಖ್ಯಮಂತ್ರಿಗಳು ನಿಗಮ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ, 18 ಬಸದಿಗಳ ಮೊಕ್ತೇಸರ ದಿನೇಶ್ ಆನಡ್ಕ, ಪೆರಿಂಜೆಗುತ್ತು ಜಯರಾಜ್ ಕಂಬಿಳಿ, ರಾಜವರ್ಮ ಬೈಲಂಗಡಿ, ವಕೀಲೆ ಶ್ವೇತಾ ಕೆ. ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Kshetra Samachara
21/11/2020 10:47 am