ಮುಲ್ಕಿ: ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು ಆಶ್ರಯದಲ್ಲಿ ನೆಹರು ಯುವ ಕೇಂದ್ರದ ಸಂಸ್ಥಾಪನಾ ದಿವಸದ ಅಂಗವಾಗಿ ಕೇಂದ್ರ ಸರಕಾರ ಆಯೋಜಿಸಿರುವ "ಫಿಟ್ ಇಂಡಿಯಾ ಅಭಿಯಾನ"ದ ಅಡಿಯಲ್ಲಿ ಹಳೆಯಂಗಡಿ 10ನೇ ತೋಕೂರು ಫೇಮಸ್ ಯೂತ್ ಕ್ಲಬ್ ಸಂಸ್ಥೆಗೆ ಮಂಗಳೂರು ರಾಜ್ಯ ಸರಕಾರಿ ನೌಕರರ ಸಂಘದ ನಂದಿನಿ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಲಬ್ ಗೆ ಪ್ರಶಸ್ತಿ ಪತ್ರವನ್ನು ಸಾಮಾಜಿಕ ಹಿತಚಿಂತಕರಾದ ರಾಮಚಂದ್ರ ಬೈಕಂಪಾಡಿ ವಿತರಿಸಿದರು.
ಸಂಸ್ಥೆಯ ಸದಸ್ಯರೊಂದಿಗೆ ಪ್ರಶಸ್ತಿಯನ್ನು ಸ್ವೀಕರಿಸಿದ ಕ್ಲಬ್ ಅಧ್ಯಕ್ಷ ಭಾಸ್ಕರ್ ಅಮೀನ್ ಮಾತನಾಡಿ, 'ಪ್ರಶಸ್ತಿ ಜವಾಬ್ದಾರಿ, ಹೊಣೆಗಾರಿಕೆಗಳನ್ನೂ ಹೆಚ್ಚಿಸುತ್ತದೆ' ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
Kshetra Samachara
17/11/2020 02:51 pm