ಮುಲ್ಕಿ: ಮುಲ್ಕಿ ಬಳಿ ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಮತ್ತು ನಾನಾ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಗ್ರಾಮೋತ್ಸವ -2020 ಗೂಡುದೀಪ ಸ್ಪರ್ಧೆ ಭಾನುವಾರ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪುನರೂರು ದೇವಳದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ್ ರಾವ್ , ಡಾ. ಸೋಂದಾ ಭಾಸ್ಕರ ಭಟ್ ಕಟೀಲು, ಮುಲ್ಕಿ ಲಯನ್ಸ್ ಅಧ್ಯಕ್ಷೆ ಪ್ರತಿಭಾ ಹೆಬ್ಬಾರ್, ಜಯಕರ್ ಎಸ್. ಸಾಲಿಯಾನ್, ನರೇಂದ್ರ ಕೆರೆಕಾಡು, ಯಜ್ಞೇಶ್ ಪಕ್ಷಿಕೆರೆ ,ಶಂಕರ್ ಮಾಸ್ಟರ್ ಗೋಳಿಜೋರ, ಅಚ್ಚುತ ಜಿ. ಕೊಲಕಾಡಿ, ರಾಘವೇಂದ್ರರಾವ್, ಗಣೇಶ್ ಆಚಾರ್ಯ , ಶಿವಾನಂದ ಕೋಟ್ಯಾನ್, ಗಣೇಶ್ ಆದಿಶಕ್ತಿ, ಕರುಣಾಕರ ಬೆಳ್ಳಾಯರು, ಲಲಿತಾ ಭಾಸ್ಕರ್, ಮಾಧವ ಶೆಟ್ಟಿಗಾರ್, ವೆಂಕಟೇಶ ಹೆಬ್ಬಾರ್ ಉಪಸ್ಥಿತರಿದ್ದರು.
ಮೂರು ವಿಭಾಗದಲ್ಲಿ ಗೂಡುದೀಪ ಸ್ಪರ್ಧೆ ನಡೆಯಿತು.
ಸಾಂಪ್ರದಾಯಿಕ ವಿಭಾಗ- ರಾಕೇಶ್(ಪ್ರ),ಮಿಥುನ್(ದ್ವಿ),ವಿಶ್ವಾಸ್(ತೃ), ಆಧುನಿಕ ವಿಭಾಗ- ಗಣೇಶ್ ಆದಿಶಕ್ತಿ(ಪ್ರ),ಶ್ರಾಗ್ವಿ ಮೋಹನ್(ದ್ವಿ),ಪ್ರಜ್ವಲ್ ಬೆಳ್ಳಾಯರು(ತೃ), ಪ್ರತಿಕೃತಿ ವಿಭಾಗ- ಜ್ಞಾನೇಶ್ವರಿ(ಪ್ರ),ಮಂಗಳ ಶ್ರೀ ಐಶ್ವರ್ಯ(ದ್ವಿ),ಹಿತಾಕ್ಷಿಣಿ(ತೃತೀಯ) ಬಹುಮಾನ ಪಡೆದರು.
ಒಟ್ಟು 48 ಗೂಡುದೀಪ ಸ್ಪರ್ಧೆಯಲ್ಲಿತ್ತು. ಭಾಗವಹಿಸಿದ ಎಲ್ಲರಿಗೂ ಪ್ರೋತ್ಸಾಹ ನಗದು ಬಹುಮಾನ ನೀಡಲಾಯಿತು. ಸಮಾಜದಲ್ಲಿ ವಿಶೇಷ ಸಾಧನೆ ಮಾಡಿದ ನರೇಂದ್ರ ಕೆರೆಕಾಡು ಮತ್ತು ಲಲಿತಾ ಭಾಸ್ಕರ್ ಅವರಿಗೆ ಸನ್ಮಾನ ನಡೆಯಿತು.
ಕುಲಕಸುಬು ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೆರೆಕಾಡಿನ 6 ಜನ ಸಾಧಕರಾದ ಶ್ರೀಮತಿ ಬಿಟ್ಟು (ಬುಟ್ಟಿ ನೇಯುವುದು),
ಪದ್ಮಾವತಿ ಶೆಟ್ಟಿ(ನಾಟಿ ಮದ್ದು ಕೊಡುವುದು), ಭಾಸ್ಕರ್ ಕುಲಾಲ್(ಕುಂಬಾರಿಕೆ), ಶೀನಾ ಆಚಾರ್ಯ(ಮರದ ಕೆಲಸ),
ಸತೀಶ್ ಮಡಿವಾಳ ( ಮಾಡುವಾಳಿಕೆ),ನಾಗಪ್ಪ ಶೆಟ್ಟಿಗಾರ್ (ಕೈಮಗ್ಗದಲ್ಲಿ ಬಟ್ಟೆ ನೇಯುವುದು.) ಅವರನ್ನು ಗೌರವಿಸಲಾಯಿತು. ಐಶ್ವರ್ಯ ಪವನ್ ಸ್ವಾಗತಿಸಿದರು.
ರಾಜೇಶ್ ಕೆರೆಕಾಡು ನಿರೂಪಿಸಿದರು. ಯತೀಶ್ ಕೆರೆಕಾಡು ವಂದಿಸಿದರು.
Kshetra Samachara
17/11/2020 02:48 pm