ಮಂಗಳೂರು: ವಿಶ್ವ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಅಂಗವಾಗಿ ದೇರಳಕಟ್ಟೆ ಬಿ.ಸಿ.ಸಿ. ಹಾಲ್ ನಲ್ಲಿ ಹಯಾತುಲ್ ಇಸ್ಲಾಂ ಮದರಸ ದೇರಳಕಟ್ಟೆಯ ಹಳೆ ವಿದ್ಯಾರ್ಥಿ ಸಂಘ ಹಾಗೂ ದೇರಳಕಟ್ಟೆ ಎಸ್ ಕೆ ಎಸ್ ಎಸ್ ಎಫ್ ಸಂಯುಕ್ತ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ ಜರುಗಿತು.
ಇದೇ ಸಂದರ್ಭ ಅತ್ಯುತ್ತಮ ಶಿಕ್ಷಕ ಪುರಸ್ಕಾರ ಪಡೆದ ಉಳ್ಳಾಲ ಟಿಪ್ಪು ಸುಲ್ತಾನ್ ಹಿರಿಯ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಎಂ.ಹೆಚ್. ಮಲಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಸುಮಾರು 106 ರಕ್ತದಾನಿಗಳು ರಕ್ತದಾನ ಮಾಡಿದರು.
ಅಬೂಬಕ್ಕರ್ ಹಾಜಿ ನಾಟೆಕಲ್ ಅಧ್ಯಕ್ಷತೆ ವಹಿಸಿದ್ದರು. ಬದ್ರಿಯಾ ಜುಮಾ ಮಸ್ಜಿದ್ ಖತೀಬ್ ರಿಯಾಝ್ ರಹ್ಮಾನಿ ಉದ್ಘಾಟಿಸಿದರು. ಇಸ್ಮಾಯಿಲ್ ಹಾಜಿ, ಬಾವಾ ಹಾಜಿ, ಅಬ್ಬಾಸ್ ಹಾಜಿ, ಅಬ್ದುಲ್ ಖಾದರ್ ಹಾಜಿ, ಇಲ್ಯಾಸ್ ಹಾಜಿ, ಅಬ್ದುರ್ರಹ್ಮಾನ್ ಸೇಟ್ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
12/11/2020 09:05 pm