ಮಂಗಳೂರು: ಉಜಿರೆಯ ಎಸ್ ಡಿಎಂ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಸೀಮನ್ಸ್ 32 ಸ್ಲೈಸ್ ಸಿಟಿ ಸ್ಕ್ಯಾನ್ ಉಪಕರಣವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಲೋಕಾರ್ಪಣೆಗೊಳಿಸಿದರು.
ಈ ವೇಳೆ ಮಾತನಾಡಿದ ಅವರು, ಹಳ್ಳಿಯ ಜನತೆಗೆ ಅತ್ಯಾಧುನಿಕ ವೈದ್ಯಕೀಯ ಸೇವೆ ಸಿಗುವಂತಾಗಬೇಕೆಂಬ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಅಶಯ ಇದೀಗ ಎಸ್ ಡಿಎಂ ಆಸ್ಪತ್ರೆ ಮೂಲಕ ಈಡೇರುತ್ತಿದೆ. ಆಸ್ಪತ್ರೆಯು ಅತ್ಯಾಧುನಿಕ ವೈದ್ಯಕೀಯ ಉಪಕರಣ ನುರಿತ ವೈದ್ಯವೃಂದ ಹಾಗೂ ಅನುಭವಿ ಸಿಬ್ಬಂದಿಯನ್ನು ಬಳಸಿಕೊಂಡು ಜನತೆಗೆ ಉತ್ತಮ ಅರೋಗ್ಯ ಸೇವೆ ನೀಡುತ್ತಿದೆ ಎಂದರು. ಈ ಸಂದರ್ಭದಲ್ಲಿ SKDRDPನ ಕಾರ್ಯನಿರ್ವಾಹಕ ನಿರ್ದೇಶಕರು ಡಾ.ಎಲ್.ಎಚ್. ಮಂಜುನಾಥ್, SKDRDP ಯೋಜನಾಧಿಕಾರಿ ಜಯಕರ ಶೆಟ್ಟಿ ಹಾಗೂ ಆಸ್ಪತ್ರೆಯ ವೈದ್ಯ ವೃಂದ, ಸಿಬ್ಬಂದಿ ಉಪಸ್ಥಿತರಿದ್ದರು.
Kshetra Samachara
29/10/2020 08:42 pm