ಬಂಟ್ವಾಳ: ತಾಜುಲ್ ಉಲಮಾ ಎಜುಕೇಶನ್ ಸೆಂಟರ್ ಕುಕ್ಕಾಜೆ ಉದ್ಘಾಟನೆ ಹಾಗೂ ಹಝ್ರತ್ ಮುಹಮ್ಮದ್ ಮುಸ್ತಫ (ಸ ಅ) 1495ನೇ ಜನ್ಮ ದಿನದ ಪ್ರಯುಕ್ತ ಬೃಹತ್ ಮಂಖೂಸ್ ಮೌಲಿದ್ ಪಾರಾಯಣ ಬಹು ಅಸಯ್ಯಿದ್ ಮುಶ್ತಾಖು ರಹ್ಮಾನ್ ತಂಙಳ್ ನೇತೃತ್ವದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಎಸ್.ವೈ.ಎಸ್. ಕುಕ್ಕಾಜೆ ಅಧ್ಯಕ್ಷ ಮಹ್ಮೂದ್ ಸಅದಿ, ಕಾರ್ಯದರ್ಶಿ ಕೆ.ಯಂ.ಮುಹಮ್ಮದ್ ಮುಸ್ಲಿಯಾರ್ ಅಬ್ಬಾಸ್ ಹಾಜಿ ಕಾಪಿಕ್ಕಾಡ್, ಅಬ್ದುಲ್ಲ ಮುಸ್ಲಿಯಾರ್ ನಾಡಾಜೆ, ಇರಾ ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಕೆ.ಅಬ್ದುಲ್ ರಝಾಕ್ ಕುಕ್ಕಾಜೆ, ಪ್ರಮುಖರಾದ ಜಿ.ಎಂ. ಇಬ್ರಾಹಿಮ್, ಮೊಯ್ದು ಕುಂಞಿ ನಾಡಾಜೆ, ಸಮಿವುಲ್ಲಾ ಕುಕ್ಕಾಜೆ, ಕೆ.ಯಂ. ಅಬ್ಬಾಸ್ ಮುಸ್ಲಿಯಾರ್ ಭಾಗವಹಿಸಿದ್ದರು. ಕೆ.ಎಂ. ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ಸ್ವಾಗತಿಸಿ, ವಂದಿಸಿದರು.
Kshetra Samachara
23/10/2020 05:35 pm