ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಿಕೆಯಲ್ಲಿ ಬದುಕು, ಸಂಪನ್ಮೂಲ, ಅನುಭವಗಳದ್ದು ಪ್ರಮುಖ ಪಾತ್ರ: ಕೃಷ್ಣಮೂರ್ತಿ

ಬಂಟ್ವಾಳ: ಮಕ್ಕಳ ಕಲಿಕೆಯಲ್ಲಿ ವಿದ್ಯಾರ್ಥಿಗಳ ದಿನನಿತ್ಯದ ಬದುಕು, ಸ್ಥಳೀಯ ಸಂಪನ್ಮೂಲಗಳು, ಸಮುದಾಯ ಹಾಗೂ ಅನುಭವಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಬೆಂಗಳೂರಿನ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಸಂಸ್ಥೆಯ ಕಲಾಶಿಕ್ಷಣ ವಿಭಾಗದ ಕಾರ್ಯಕ್ರಮ ಅಧಿಕಾರಿ ಕೃಷ್ಣಮೂರ್ತಿ ಹೇಳಿದರು.

ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಲಾದ ಮಕ್ಕಳು ಮತ್ತು ಶಿಕ್ಷಣ ಸಂವಾದ ಕಾರ್ಯಕ್ರಮದಲ್ಲಿ ಅವರು ಶಿಕ್ಷಕರು ಹಾಗೂ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದರು. ಐಎಫ್ಎ ಸಂಸ್ಥೆಯು ಶಿಕ್ಷಕರು ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ಜೊತೆಗೆ ಸರಕಾರಿ ಶಾಲೆಗಳ ಸಬಲೀಕರಣದಲ್ಲಿ ಡಿಎಸ್ಇಆರ್ ಟಿ ಯೊಂದಿಗೆ ಕೈ ಜೋಡಿಸಿದೆ ಎಂದ ಅವರು, ಐಎಫ್ಎ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು. ಪತ್ರಕರ್ತ ಮತ್ತು ಐಎಫ್ಎ ಗ್ರ್ಯಾಂಟಿ, ಮೌನೇಶ ವಿಶ್ವಕರ್ಮ ಸ್ವಾಗತಿಸಿದರು . ಪತ್ರಕರ್ತ ವೆಂಕಟೇಶ್ ಬಂಟ್ವಾಳ ವಂದಿಸಿದರು. ಪತ್ರಕರ್ತ ರತ್ನದೇವ್ ಪೂಂಜಾಲಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.

Edited By : Vijay Kumar
Kshetra Samachara

Kshetra Samachara

22/10/2020 11:50 pm

Cinque Terre

4.26 K

Cinque Terre

0

ಸಂಬಂಧಿತ ಸುದ್ದಿ