ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜನಮನ ಜಯಿಸಿದ್ದ ಜಯ ಸಿ. ಸುವರ್ಣ ನಿಧನಕ್ಕೆ ಕುದ್ರೋಳಿ ದೇವಸ್ಥಾನ ಆಡಳಿತ ಮಂಡಳಿ ಸಂತಾಪ

ಮಂಗಳೂರು: ಬಿಲ್ಲವರ ಮಹಾ ಮಂಡಲದ ಸ್ಥಾಪಕಾಧ್ಯಕ್ಷ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಯ ಸಿ. ಸುವರ್ಣ ನಿಧನಕ್ಕೆ ಕುದ್ರೋಳಿ ಕ್ಷೇತ್ರದ ಆಡಳಿತ ಮಂಡಳಿ ತೀವ್ರ ಸಂತಾಪ ವ್ಯಕ್ತ ಪಡಿಸಿದೆ.

ಮಂಗಳವಾರ ನಡೆದ ಸಂತಾಪ ಸೂಚಕ ಸಭೆಯಲ್ಲಿ ಕ್ಷೇತ್ರದ ಅಧ್ಯಕ್ಷ ಎಚ್.ಎಸ್ ಸಾಯಿರಾಂ, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕಾರ್ಯದರ್ಶಿ ಬಿ.ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್. ಮೊದಲಾದವರು ಮಾತನಾಡಿ, ಜಯ ಸಿ. ಸುವರ್ಣ ಅವರು ಬಿಲ್ಲವ ಸಮಾಜಕ್ಕೆ ಸಲ್ಲಿಸಿದ ಕಾರ್ಯಗಳನ್ನು ಸ್ಮರಿಸಿದರು.

ಟ್ರಸ್ಟಿಗಳಾದ ಬಿ.ಕೆ.ತಾರಾನಾಥ್, ರವಿಶಂಕರ ಮಿಜಾರ್, ಕೆ.ಮಹೇಶ್ಚಂದ್ರ, ಕ್ಷೇತ್ರಾಡಳಿತ ಮಂಡಳಿ ಸದಸ್ಯರಾದ ಹರಿಕೃಷ್ಣ ಬಂಟ್ವಾಳ್, ದೇವೇಂದ್ರ ಪೂಜಾರಿ, ಶೇಖರ್ ಪೂಜಾರಿ, ಡಾ.ಬಿ.ಜಿ.ಸುವರ್ಣ, ಕ್ಷೇತ್ರದ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಎಂ.ವೇದಕುಮಾರ್, ದೇವೇಂದ್ರ ಪೂಜಾರಿ, ವಿಶ್ವನಾಥ್ ಕಾಸರಗೋಡು, ಎಸ್.ಜಯ ವಿಕ್ರಂ, ರಾಧಾಕೃಷ್ಣ, ಜೆ.ಶಂಕರ್, ಡಿ.ಡಿ.ಕಟ್ಟೆಮಾರ್, ಅನುಸೂಯ ಬಿ.ಟಿ.ಸಾಲ್ಯಾನ್, ಕೆ.ಚಿತ್ತರಂಜನ್ ಗರೋಡಿ, ಹರೀಶ್ ಕುಮಾರ್, ಜತಿನ್ ಅತ್ತಾವರ, ದೂಮಪ್ಪ ಮೇಸ್ತ್ರಿ, ಎನ್.ಹರಿಶ್ಚಂದ್ರ, ರಮಾನಾಥ್ ಕಾರಂದೂರು, ಕ್ಷೇತ್ರದ ಮ್ಯಾನೇಜರ್ ವಿನೀತ್ ಮೊದಲಾದವರು ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

21/10/2020 08:57 pm

Cinque Terre

4.21 K

Cinque Terre

0

ಸಂಬಂಧಿತ ಸುದ್ದಿ