ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬಂಟ್ವಾಳ, ಪಾಣೆಮಂಗಳೂರು ವಲಯ ಮತ್ತು ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಬಂಟ್ವಾಳ ಆಶ್ರಯದಲ್ಲಿ ಕೊರೊನಾ ವೈರಸ್ ಮತ್ತು ಡ್ರಗ್ಸ್ ಹಾವಳಿ ಬಗ್ಗೆ ನಾಗರಿಕರಲ್ಲಿ ಅರಿವು, ಜಾಗೃತಿ
ಮೂಡಿಸಲು ದಾವಣಗೆರೆ ತಂಡದವರಿಂದ ಬೀದಿ ನಾಟಕ ಪ್ರದರ್ಶನ ನಡೆಯಿತು.
ಅಧ್ಯಕ್ಷತೆಯನ್ನು ಸಜಿಪ ಮೂಡ ಗ್ರಾಪಂ ಅಧ್ಯಕ್ಷ ವಿಶ್ವನಾಥ ಬೆಲ್ಚಡ ವಹಿಸಿದ್ದರು. ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷ ಎ. ಸಿ. ಭಂಡಾರಿ ಉದ್ಘಾಟಿಸಿ, ಕೊರೊನಾ ವಿಪತ್ತು ಮತ್ತು ಮಾದಕ ವ್ಯಸನ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಬೀದಿನಾಟಕ ಗಳಂತಹ ಕಾರ್ಯಕ್ರಮ ಯೋಜನೆ ಮೂಲಕ ಹಮ್ಮಿ ಕೊಂಡಿರುವುದು ಡಾ. ಹೆಗ್ಗಡೆ ಅವರ ಸಾಮಾಜಿಕ ಕಳಕಳಿಯ ಪ್ರತೀಕ ಎಂದರು.
ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ., ಬಂಟ್ವಾಳ ನಗರ ಠಾಣಾ ಸಿಬ್ಬಂದಿ ನಾಗರಾಜ್ ಮಂಗಳೂರು, ಬಂಟ್ವಾಳ ವಲಯ ಅಧ್ಯಕ್ಷ ವಸಂತ, ಸಜಿಪ ಮೂಡ ಒಕ್ಕೂಟ ಅಧ್ಯಕ್ಷ ಚಂದ್ರಹಾಸ್ ಉಪಸ್ಥಿತರಿದ್ದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸಪ್ನ ಸ್ವಾಗತಿಸಿದರು. ವಲಯ ಮೇಲ್ವಿಚಾರಕಿ ಅಮಿತಾ ನಿರೂಪಿಸಿ, ವಂದಿಸಿದರು.
Kshetra Samachara
15/10/2020 04:08 pm