ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಅಕ್ರಮ ದನ ಸಾಗಾಟ ತಡೆಯಲು ಸೂಚನೆ ನೀಡಿದ ಎಸ್ಸೈ ಮೇಲೆ ವಾಹನ ನುಗ್ಗಿಸಿದ ಆರೋಪಿಗಳು

ಬಂಟ್ವಾಳ: ಅಕ್ರಮವಾಗಿ ದನ ಸಾಗಾಣಿಕೆ ಮಾಡುತ್ತಿದ್ದ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದ ಎಸ್.ಐ.ಮೇಲೆ ವಾಹನ ನುಗ್ಗಿಸಿದ ಘಟನೆ ಘಟನೆ ವಾಮದಪದವು ಸಮೀಪದ ಕುದ್ಕೊಳಿ ಎಂಬಲ್ಲಿ ಭಾನುವಾರ ಮುಂಜಾನೆ ನಡೆದಿದೆ.

ವಾಮದಪದವು ಸಮೀಪದ ಕುದ್ಕೊಳಿ ಎಂಬಲ್ಲಿ ಪುಂಜಾಲಕಟ್ಟೆ ಎಸ್. ಐ.ಸುತೇಶ್ ಎಂಬವರ ಮೇಲೆ ದನ ಸಾಗಾಟ ಮಾಡುತ್ತಿದ್ದ ಆರೋಪಿಗಳು ವಾಹನ ನುಗ್ಗಿಸಲು ಪ್ರಯತ್ನಿಸಿ ಪರಾರಿಯಾಗಿದ್ದಾರೆ.

ರಾತ್ರಿ ವೇಳೆ ರೌಂಡ್ಸ್ ನಲ್ಲಿದ್ದ ಎಸ್ಐ.ಸುತೇಶ್ ಅವರು ಕುದ್ಕೊಳಿ ಎಂಬಲ್ಲಿ ಸಂಶಯಾಸ್ಪದ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದಾಗ ಚಾಲಕ ವಾಹನ ನಿಲ್ಲಿಸದೆ ಎಸ್.ಐ.ಮೇಲೆ ನುಗ್ಗಿಸಿದ್ದಾನೆ. ವಾಹನದಲ್ಲಿ ಇಬ್ಬರು ಆರೋಪಿಗಳು ಇದ್ದು, ವಾಹನ ಬಿಟ್ಟು ಪರಾರಿಯಾಗಿದ್ದಾರೆ. ವಾಹನದಲ್ಲಿ ಮೂರು ದನಗಳಿದ್ದು , ಒಂದು ದನ ಹಾಲು ಕೊಡುವುದು ಇನ್ನೊಂದು ಗಬ್ಬದ ದನ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.

ರಾತ್ರಿ ವೇಳೆ ಆರೋಪಿಗಳು ಹಟ್ಟಿಯಿಂದ ಕಳ್ಳತನ ಮಾಡಿ ತಂದಿರುವ ದನಗಳಾಗಿರಬೇಕು ಎಂಬ ಸಂಶಯ ಇದೆ ಎಂಬ ಮಾಹಿತಿ ಪೋಲೀಸರು ನೀಡಿದ್ದಾರೆ.

Edited By :
Kshetra Samachara

Kshetra Samachara

15/05/2022 08:41 am

Cinque Terre

6.35 K

Cinque Terre

0

ಸಂಬಂಧಿತ ಸುದ್ದಿ