ಮಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಪ್ರತ್ಯೇಕ ಪ್ರಕರಣದಲ್ಲಿ 40 ಲಕ್ಷ ರೂ.ಗೂ ಅಧಿಕ ಮೌಲ್ಯದ ಅಕ್ರಮ ಸಾಗಾಟದ ಚಿನ್ನವನ್ನು ಸೀಝ್ ಮಾಡಲಾಗಿದೆ.
ನಾಲ್ಕು ಹಳದಿ ಶೈನಿಂಗ್ ಮೆಟಲ್ ಒಳಗಡೆ 24ಕ್ಯಾರೆಟ್ ಚಿನ್ನವನ್ನು ಬಚ್ಚಿಟ್ಟು ನೆಸ್ಲೆ ಬ್ರ್ಯಾಂಡ್ ನ 2 ಡೈರಿ ಕ್ರೀಂ ಟಿನ್ ನೊಳಗಡೆ ಇಟ್ಟು ಪ್ರಯಾಣಿಕನೊಬ್ಬ ಸಾಗಾಟ ಮಾಡುತ್ತಿದ್ದ. ಅನುಮಾನಗೊಂಡು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಈ ಕೃತ್ಯ ಬಯಲಾಗಿದೆ. ಈತನಿಂದ 116.540 ಗ್ರಾಂ ತೂಕದ 6,00,181 ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ದುಬೈನಿಂದ ಆಗಮಿಸಿರುವ ಪ್ರಯಾಣಿಕನೋರ್ವನು ಚಿನ್ನವನ್ನು ಪೇಸ್ಟ್ ರೂಪದಲ್ಲಿ ಬಚ್ಚಿಟ್ಟು ಸಾಗಾಟ ಮಾಡುತ್ತಿದ್ದ. ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕನನ್ನು ಪರಿಶೀಲನೆ ಮಾಡಿದ್ದಾರೆ. ಆಗ ಈತನಲ್ಲಿ 24 ಕ್ಯಾರೆಟ್ ನ 732ಗ್ರಾಂ ತೂಕದ 37,69,800 ರೂ. ಮೌಲ್ಯದ ಚಿನ್ನ ಪತ್ತೆಯಾಗಿದೆ. ಎರಡೂ ಪ್ರಕರಣದಲ್ಲಿ ಚಿನ್ನವನ್ನು ವಶಪಡಿಸಿಕೊಂಡ ಕಸ್ಟಮ್ಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
Kshetra Samachara
05/05/2022 09:33 pm