ಸುರತ್ಕಲ್: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಾಯಿ ಕೋಡಿಕೆರೆ 7ನೇ ಕ್ರಾಸ್ ಶಿವಾಜಿ ನಗರ ನಿವಾಸಿ ಪ್ರಸನ್ನ ಕುಮಾರ್ ಶೆಟ್ಟಿ (34) ನಾಪತ್ತೆಯಾದ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದ ಪ್ರಸನ್ನ ಕುಮಾರ್ ಶೆಟ್ಟಿ ಎಂಆರ್ ಪಿಎಲ್ ಗೆ ಸಂಬಂಧಿಸಿದ ಬಿಟ್ ಟ್ರಾವೆಲ್ಸ್ ನ ಕಾರಿನಲ್ಲಿ ಚಾಲಕ ಕೆಲಸ ಮಾಡಿಕೊಂಡಿದ್ದು ದಿನಾಂಕ 25/04/2022 ಬೆಳಿಗ್ಗೆ 11:35 ಗಂಟೆಗೆ ಮನೆಗೆ ಬಂದಿದ್ದು ನಂತರ ತನ್ನ ಮಾಲೀಕರ ಸಂಬಂಧಿಕರು ತೀರಿಹೋಗಿದ್ದು ಈ ಬಗ್ಗೆ ಮೈಸೂರಿಗೆ ಮಾಲೀಕರ ಜೊತೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೋದವರು ಮನೆಗೆ ಬಾರದೆ ನಾಪತ್ತೆಯಾಗಿರುತ್ತಾರೆ.
ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮಾಹಿತಿ ದೊರೆತಲ್ಲಿ ಸುರತ್ಕಲ್ ಪೊಲೀಸ್ ಠಾಣೆಗೆ ದೂರವಾಣಿ 08242220540, 9480802345 ಸಂಪರ್ಕಿಸಲು ಕೋರಲಾಗಿದೆ.
Kshetra Samachara
26/04/2022 07:32 pm